Home Dskshina Kannada ಮುಲ್ಕಿ : ಕೊಲಕಾಡಿ ಬಳಿ ಆಟೋ ಹಾಗೂ ಬೈಕ್ ನಡುವೆ ಅಪಘಾತ : ಇಬ್ಬರು ಗಂಭೀರ

ಮುಲ್ಕಿ : ಕೊಲಕಾಡಿ ಬಳಿ ಆಟೋ ಹಾಗೂ ಬೈಕ್ ನಡುವೆ ಅಪಘಾತ : ಇಬ್ಬರು ಗಂಭೀರ

ಮುಲ್ಕಿ : ಬಪ್ಪನಾಡು ಏಳಿಂಜೆ ಹೆದ್ದಾರಿಯ ಕೊಲಕಾಡಿ ರೈಲ್ವೇ ಗೇಟ್ ಬಳಿ ಬೈಕ್ ಮತ್ತು ಆಟೋ ನಡುವೆ ಅಪಘಾತ ಸಂಭವಿಸಿದ್ದು ಇಬ್ಬರು ಸವಾರರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

 

ಗಾಯಾಳುಗಳನ್ನು ಆಟೋ ಚಾಲಕ ಕವತ್ತಾರು ಗುಡ್ಡೆಯಂಗಡಿ ನಿವಾಸಿ ಸಂತೋಷ್(38) ಮತ್ತು ಬೈಕ್ ಸವಾರ ಕೊಲ್ಲೂರುಪದವು ನಿವಾಸಿ ಕೀರ್ತನ್ ಪೂಜಾರಿ(30) ಎಂದು ಗುರುತಿಸಲಾಗಿದೆ.

 

ಗಾಯಾಳು ಬೈಕ್ ಸವಾರ ಕೀರ್ತನ್ ಮುಲ್ಕಿಯಿಂದ ಕೊಲ್ಲೂರುಪದವು ಕಡೆಗೆ ಹೋಗುತ್ತಿದ್ದು, ಕೊಲಕಾಡಿ ರೈಲ್ವೇ ಗೇಟ್ ಬಳಿ ವಿರುದ್ಧ ದಿಕ್ಕಿನಲ್ಲಿ ಬಂದ ಆಟೋ ಜೊತೆ ಅಪಘಾತ ಸಂಭವಿಸಿದೆ. ಅಪಘಾತದಿಂದ ಎರಡು ವಾಹನಗಳಿಗೆ ಹಾನಿಯಾಗಿದ್ದು, ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

 

ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಹಾಗೂ ಮುಲ್ಕಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ದೇವರಾಜ ಕೊಲಕಾಡಿ ಭೇಟಿ ನೀಡಿ ಪರಿಶೀಲಿಸಿದ್ದು ಅಪಘಾತಕ್ಕೀಡಾದ ಎರಡು ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ.