Home Kundapura News ನಾಗೂರಿನಲ್ಲಿ ‘ಚಿಣ್ಣರ ಕಲರವ-2026’ ಬೇಸಿಗೆ ಶಿಬಿರ : ಮಕ್ಕಳ ಪ್ರತಿಭೆಗೆ ವೇದಿಕೆ

ನಾಗೂರಿನಲ್ಲಿ ‘ಚಿಣ್ಣರ ಕಲರವ-2026’ ಬೇಸಿಗೆ ಶಿಬಿರ : ಮಕ್ಕಳ ಪ್ರತಿಭೆಗೆ ವೇದಿಕೆ

ಕಿರಿಮಂಜೇಶ್ವರ ಗ್ರಾಮದ ನಾಗೂರಿನಲ್ಲಿ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರ ಚಿಣ್ಣರ ಕಲರವ 2026 ಕಾರ್ಯಕ್ರಮ ರಾಘವೇಂದ್ರ ನಾಗೂರು ಇವರ ನಿರ್ದೇಶನದಲ್ಲಿ ಮೇ 23 ಶನಿವಾರ ಶ್ರೀ ಕೃಷ್ಣ ಲಲಿತ ಕಲಾ ಮಂದಿರದಲ್ಲಿ ನೆಡೆಸಲಾಯಿತು.

ಗ್ರಾಮ ಪಂಚಾಯತ್ ಸದಸ್ಯರಾದ ಈಶ್ವರ ದೇವಾಡಿಗ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕನ್ನಡಾಂಬೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ಮಕ್ಕಳ ಪ್ರತಿಭೆ ಬೆಳೆಯಲು ಇಂತಹ ಶಿಬಿರಗಳು ಪ್ರೇರಣೆಯಾಗಿದ್ದು,ಸಂಸ್ಕೃತಿ ಮತ್ತು ಕಲೆಯ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಸಹಕರಿಸಿದ ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು

ಶಿಬಿರದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು.
ಕನ್ನಡ ಕವನ ಕಟ್ಟುವಿಕೆ, ಪೇಪರ್ ಕ್ರಾಪ್ಟ್, ಮಾರ್ಬಲ್ ಆರ್ಟ್,ಮುಖವಾಡ ತಯಾರಿಕೆ, ಹಾಡು ಪಾಡು, ಗಾಳಿಪಟ ತಯಾರಿಕೆ, ಬಣ್ಣದ ಜೊತೆ ಆಟ, ಸೂಪರ್ ಮಿನಿಟ್ ಹಾಗೂ ಇತರ ಕಾರ್ಯಕ್ರಮಗಳು ನೆಡೆಸಲಾಯಿತು.

ಕಾರ್ಯಕ್ರಮದ ಸಂಯೋಜಕರಾದ ರಾಘವೇಂದ್ರ ಅವರು ಮಾತನಾಡಿ,“ಚಿಣ್ಣರ ಕಲರವ-2026” ಯಶಸ್ವಿಯಾಗಿ ನೆರವೇರಲು ಅನೇಕರು ತಮ್ಮ ಸಹಕಾರ ಮತ್ತು ಪ್ರೋತ್ಸಾಹ ನೀಡಿದ್ದಾರೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿಶ್ರೀ ರತ್ನಾಕರ್ ಉಡುಪ, ಸಂಧ್ಯಾ ಉಡುಪ, ಫಾರುಕ್ ಸಾಹೇಬ್, ಎಮ್ ಹೆಚ್ ಉಬೈದುಲ್ಲಾ, ಚಿತ್ತಾರ ಡಿಜಿಟಲ್ ಯೋಗೀಶ್ ದೇವಾಡಿಗ,ಗಣೇಶ್ ದೇವಾಡಿಗ, ರಾಘವೇಂದ್ರ ಖಾರ್ವಿ, ಬಾಲಕೃಷ್ಣ ಪ್ರಭು, ಮಂಜುನಾಥ್ ಕಾರಂತ್, ಡಾ. ಪ್ರವೀಣ ಶೆಟ್ಟಿ,ಜಗದೀಶ್ ಕೆ, ನಾಗರತ್ನ, ವಂದನಾ, ವಿದ್ಯಾಧರ ದೇವಾಡಿಗ ಜಿಶಾನ್, ನತರ್ ಸುರೇಶ,ಅಚ್ಚುತ್ ಬಿಲ್ಲವ, ಪದ್ಮಾವತಿ ಆರ್ಟ್ ಗ್ಯಾಲರಿ ಯ ದಿನಕರ,ಭಾಸ್ಕರ ದೇವಾಡಿಗ, ನಿತ್ಯಾನಂದ ದೇವಾಡಿಗ, ಗಣೇಶ್ ಹೇರಾಂಜಲು, ಕೃಷ್ಣ ಕೊಡೇರಿ, ಅನ್ನಪೂರ್ಣ ಹಾಗೂ ನೂರಾರು ಪೋಷಕರು ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಮಹಾಬಲ ಕೆ ಮುಖ್ಯ್ಯೊಪಾಧ್ಯಾಯರು ಸ.ಹಿ.ಪ್ರಾ ಶಾಲೆ ಕಂಬದಕೋಣೆ, ಶೇಖರ್ ದೇವಾಡಿಗ ಬಿ ಸ.ಕಿ.ಪ್ರಾ ಶಾಲೆ ಬಲಗೋಣ ಜಿಲ್ಲಾ ಉತ್ತಮ ಪ್ರಶಸ್ತಿ ವಿಜೇತ ಶಿಕ್ಷಕರಾದ ದಿನೇಶ್ ವಿ ಮುಖ್ಯ ಶಿಕ್ಷಕರು ಸ.ಕಿ.ಪ್ರಾ ಶಾಲೆ ಅಜ್ರಗದ್ದೆ ಹಾಗೂ ರಾಜೇಂದ್ರ ಹಳ್ಳಿಹೊಳೆ ಉಪಸ್ಥಿತರಿದ್ದರು.

ಶಿಬಿರದ ನಿರ್ದೇಶಕರಾದ ರಾಘವೇಂದ್ರ ನಾಗೂರು ಸ್ವಾಗತಿಸಿದರು ದಿನೇಶ್ ವಿ ಕಾರ್ಯಕ್ರಮ ನಿರೂಪಿಸಿದರು ಹಾಗೂ ಸಂತೋಷ ಮೊಗವೀರ ವಂದಿಸಿದರು.