Home Crime ಉದ್ಯಾವರ ಬಳಿ ರಸ್ತೆ ದಾಟುವ ವೇಳೆ ಕ್ರೇನ್ ಡಿಕ್ಕಿ : ಮಹಿಳೆ ಸ್ಥಳದಲ್ಲೇ ಮೃತ್ಯು…!!

ಉದ್ಯಾವರ ಬಳಿ ರಸ್ತೆ ದಾಟುವ ವೇಳೆ ಕ್ರೇನ್ ಡಿಕ್ಕಿ : ಮಹಿಳೆ ಸ್ಥಳದಲ್ಲೇ ಮೃತ್ಯು…!!

ಉಡುಪಿ : ಉದ್ಯಾವರ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಅಂಕೋಲದ ಗಜಾನನ ಹುಲಸ್ವಾರ (32) ಅವರು ಚಾಲಕರಾಗಿ ಕೆಲಸ ಮಾಡುತ್ತಿದ್ದು, ಮಾರ್ಚ್ 26ರಂದು ಸಂಜೆ ಮಂಗಳೂರಿನ SCS ಆಸ್ಪತ್ರೆಯಿಂದ ಸುನೀಲ್ ರಾಮಚಂದ್ರ ರಾಯ್ಕರ್ ಅವರ KA-30-N-1982 ಎರ್ಟಿಗಾ ಕಾರಿನಲ್ಲಿ ದಿವ್ಯ ಎಸ್. ರಾಯ್ಕರ್ ಮತ್ತು ಅವರ ಮಗಳು ಶ್ರೆಯಾ ಸನೀಲ್ ರಾಯ್ಕರ್ ಜೊತೆ ಮಂಗಳೂರಿನಿಂದ ಹೊರಟಿದ್ದರು. ಸಂಜೆ ಸುಮಾರು 6 ಗಂಟೆಗೆ ಉಡುಪಿ ತಾಲೂಕಿನ ಉದ್ಯಾವರ ಗ್ರಾಮದ ಹೊಟೇಲ್ ಲಲಿತ್ ಬಳಿ ತಲುಪಿದ್ದರು.

ಈ ವೇಳೆ ದಿವ್ಯ ಎಸ್. ರಾಯ್ಕರ್ ಅವರು ತಮ್ಮ ಮಗನಿಗೆ ಬ್ಯಾಟ್ ಖರೀದಿಸಲು ರಾಷ್ಟ್ರೀಯ ಹೆದ್ದಾರಿ 66ರ ಪಶ್ಚಿಮ ದಿಕ್ಕಿನಲ್ಲಿದ್ದ ವ್ಯಾಪಾರಸ್ಥರ ಬಳಿ ಹೋಗಲು ರಸ್ತೆ ದಾಟಲು ಪ್ರಯತ್ನಿಸಿದ್ದರು. ಈ ಸಂದರ್ಭದಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ KA-20-D-4896 ನಂಬರಿನ ACE ಕ್ರೇನ್‌ನ್ನು ಚಾಲಕ ಚರಣ್ ಬಂಗೇರಾ ದುಡುಕು ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು ದಿವ್ಯ ಎಸ್. ರಾಯ್ಕರ್ ಅವರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ಪರಿಣಾಮ ದಿವ್ಯ ಎಸ್. ರಾಯ್ಕರ್ ಅವರು ಕ್ರೇನ್‌ನ ಮುಂದಿನ ಚಕ್ರಕ್ಕೆ ಸಿಲುಕಿ ಹೊಟ್ಟೆ ಹಾಗೂ ದೇಹದ ಇತರ ಭಾಗಗಳ ಮೇಲೆ ಟೈರ್ ಹರಿದ ಪರಿಣಾಮ ತೀವ್ರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಂಬ್ಯುಲೆನ್ಸ್ ಮೂಲಕ ಉಡುಪಿಯ ಆದರ್ಶ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಅವರು ಆಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.