Home Crime ಬಂಟ್ವಾಳ : ಅಕ್ರಮ ಮರಳು ಸಾಗಾಟ : ಪೊಲೀಸರಿಂದ ದಾಳಿ…!!

ಬಂಟ್ವಾಳ : ಅಕ್ರಮ ಮರಳು ಸಾಗಾಟ : ಪೊಲೀಸರಿಂದ ದಾಳಿ…!!

ಬಂಟ್ವಾಳ:  ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿರುವಾಗ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿದಂತೆ ಪೊಲೀಸರು ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ಪಿರ್ಯಾಧಿದಾರರಾದ ಮಂಜುನಾಥ ಟಿ ಪೊಲೀಸ್ ಉಪನಿರೀಕ್ಷಕರು, ಕಾ&ಸು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಎಂಬವರ ದೂರಿನಂತೆ ದಿನಾಂಕ: 11.03.2026 ರಂದು 22.00 ಗಂಟೆಗೆ ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪ್ ನಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ಮೂಲರ್ ಪಟ್ನಾದಲ್ಲಿರುವ ಸಮಯ ಬಂಟ್ವಾಳ ತಾಲೂಕು ಅರಳ ಗ್ರಾಮದ ಮುಲ್ಲಾರ್ ಪಟ್ನದ ಅಜಾದ್ ನಗರ ಎಂಬಲ್ಲಿ ಪಾಲ್ಗುಣಿ ನದಿ ಕಿನಾರೆಯಿಂದ ಯಾರೋ ಮರಳನ್ನು ಅಕ್ರಮವಾಗಿ ಸಾಗಾಟ ಮಾಡಲು ಪಿಕಫ್ ವಾಹನದಲ್ಲಿ ತುಂಬಿಸುತ್ತಿರುವುದಾಗಿ ಬಂದ ಮಾಹಿತಿಯಂತೆ ಸಿಬ್ಬಂದಿಗಳೊಂದಿಗೆ ಮುಲ್ಲಾರ್ ಪಟ್ನಾ ಜಂಕ್ಷನ್ ನಿಂದ ಪಂಚರಾದ ಮಹಮ್ಮದ್ ಆಶೀರ್ ಮತ್ತು ಸಾಹುಲ್ ಹಮೀದ್ ರವರನ್ನು ಕರೆದುಕೊಂಡು 22.15 ಗಂಟೆಗೆ ಬಂದು ನೋಡಲಾಗಿ ಇಬ್ಬರು ಪಿಕಪ್ ವಾಹನದಲ್ಲಿ ಮರಳು ತುಂಬಿಸುತ್ತಿರುವುದನ್ನು ಕಂಡು ಪಿರ್ಯಾಧಿದಾರರು ಪಂಚರ ಸಮಕ್ಷಮ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಸ್ಥಳದಲ್ಲಿ ಓರ್ವನನ್ನು ಹಿಡಿದು ವಿಚಾರಿಸಿದಲ್ಲಿ ಮರಳನ್ನು ನದಿಯಿಂದ ತೆಗೆಯಲು ಯಾವುದೇ ಪರವಾನಿಗೆ ಇಲ್ಲವಾಗಿ ಪಿರ್ಯಾದಿದಾರರಿಗೆ ತಿಳಿಸಿ, ಓಡಿ ಹೋದ ವ್ಯಕ್ತಿಯು ಮರ್ಜುಕ್ ಎಂಬುವುದಾಗಿ ತಿಳಿಸಿರುತ್ತಾನೆ. ನಂತರ ಸ್ಥಳದಲ್ಲಿ ಮರಳು ತುಂಬಿದ ಕೆಎ-19-ಡಿ-3947 ನೇಯ ನೊಂದಣಿ ಸಂಖ್ಯೆಯ ಪಿಕಫ್ ವಾಹನವಿದ್ದು ಸದ್ರಿ ಪಿಕಪ್ ವಾಹನದ ಅಂದಾಜು ಮೌಲ್ಯ 2,50,000 /- ಆಗಬಹುದು ಮತ್ತು ಪಿಕಪ್ ವಾಹನದಲ್ಲಿ ತುಂಬಿದ ಮರಳಿನ ಅಂದಾಜು ಮೌಲ್ಯ 3,000 /- ರೂ ಆಗಬಹುದು ಮತ್ತು ಮರಳು ತುಂಬಿಸಲು ಉಪಯೋಗಿಸಿದ ಹಳದಿ ಮತ್ತು ನೀಲಿ ಬಣ್ಣದ ಪೈಬರ್ ನ 2 ಬುಟ್ಟಿಗಳಿದ್ದು ಇವುಗಳ ಅಂದಾಜು ಮೌಲ್ಯ 200 ರೂ ಆಗಬಹುದು ಎಂಬುವುದಾಗಿ ಹೀಗೆ ಒಟ್ಟು ಸ್ವತ್ತುಗಳ ಮೌಲ್ಯ 2,53,200 /- ರೂ ಆಗಿದ್ದು ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ ಕ್ರ ನಂಬ್ರ 33/2026 ಕಲಂ: KARNATAKA MINOR MINERAL CONSISTENT RULE 1994 (U/s-42,43,44); MMDR (MINES AND MINERALS REGULATION OF DEVELOPMENT) ACT 1957 (U/s-4(1),4(1A),21(1)(1A)); THE BHARATIYA NYAYA SANHITA (BNS), 2023 (U/s-303(2). ಯಂತೆ ಪ್ರಕರಣ ದಾಖಲಾಗಿರುತ್ತದೆ