Home Kundapura News ಎದೆನೋವು: ಮಹಿಳೆ ಸಾವು

ಎದೆನೋವು: ಮಹಿಳೆ ಸಾವು

ಕುಂದಾಪುರ: ಬೈಂದೂರು ತಾಲೂಕಿನ ಶಿರೂರು ಗ್ರಾಮದ ಗಿರಿಜಾ(81) ಎಂಬ ಮಹಿಳೆಯೊಬ್ಬರು ಎದೆನೋವು ಕಾಣಿಸಿ ಕೊಂಡು ಮೃತಪಟ್ಟಿದ್ದಾರೆ.

 

ಸೋಮವಾರ, ಬೆಳಗ್ಗೆ ಮನೆಯಲ್ಲಿರುವಾಗ ಎದೆನೋವು ಕಾಣಿಸಿದ್ದು ಕೂಡಲೆ ಅವರನ್ನು ಭಟ್ಕಳದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ಪಡೆದುಕೊಂಡು ಮನೆಗೆ ಬಂದಿದ್ದರು.

 

ಮಧ್ಯಾಹ್ನ ಮತ್ತೆ ಎದೆನೋವು ಕಾಣಿಸಿ ಕೊಂಡ ಹಿನ್ನೆಲೆಯಲ್ಲಿ ಬೈಂದೂರು ಸಮು ದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದ್ದು ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.