Home Crime ಅಕ್ರಮ ಜಾನುವಾರು ಸಾಗಾಟ : ಟೆಂಪೋ ವಶಕ್ಕೆ…!!

ಅಕ್ರಮ ಜಾನುವಾರು ಸಾಗಾಟ : ಟೆಂಪೋ ವಶಕ್ಕೆ…!!

ಉಪ್ಪಿನಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ‌ ಸಮೀಪ ಗೂಡ್ಸ್ ಟೆಂಪೋದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ನಡೆಸುತ್ತಿರುವಾಗ ಪೊಲೀಸರು ಟೆಂಪೋ ಸಹಿತ ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ವಿವರ: ಪಿರ್ಯಾಧಿದಾರರಾದ ಅನನ್ಯ ಶ್ರೀವಸ್ತವ್ ಪ್ರೋ. ಐಪಿಎಸ್ ಪೊಲೀಸ್ ಉಪ ನಿರೀಕ್ಷಕರು(ಪ್ರಭಾರ) ಉಪ್ಪಿನಂಗಡಿ ಪೊಲೀಸ್ ಠಾಣೆ ಎಂಬವರ ದೂರಿನಂತೆ ದಿನಾಂಕ 11-03-2026 ರಂದು ಗುಂಡ್ಯ ಚೆಕ್ ಪೋಸ್ಟ್ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ವಾಹನ ತಪಾಸಣೆ ಮಾಡುತ್ತಿದ್ದಾಗ 05.45 ಗಂಟೆ ಸಮಯಕ್ಕೆ ಹಾಸನ ಕಡೆಯಿಂದ ಗೂಡ್ಸ್ ಟೆಂಪೋ ಒಂದು ಬರುತ್ತಿದ್ದು ನಿಲ್ಲಿಸಿ ತಪಾಸಣೆ ಮಾಡುತ್ತಿದ್ದಾಗ ಟೆಂಪೋದಲ್ಲಿ ಜಾನುವಾರು ಇರುವುದಾಗಿ ತಿಳಿಸಿದ್ದು, ಈ ವಿಚಾರವನ್ನು ಪಿರ್ಯಾದುದಾರರಿಗೆ ತಿಳಿಸಿ ಪಿರ್ಯಾದುದಾರರು ಸ್ಥಳದಲ್ಲಿ ಆರೋಪಿಯನ್ನು ವಿಚಾರಿಸಿ ಯಾವುದೇ ಪರವಾನಿಗೆ ಇಲ್ಲದೇ ಹಾಸನದಿಂದ ಕೇರಳ ರಾಜ್ಯದ ಕಾಸರಗೋಡಿಗೆ ಮಾಂಸ ಮಾಡುವ ಉದ್ದೇಶದಿಂದ ಸಾಗಾಟ ಮಾಡುವುದಾಗಿ ತಿಳಿಸಿದ್ದು, ಅದರಂತೆ ಪಿರ್ಯಾದುದಾರರು ಪಂಚರ ಸಮಕ್ಷಮ ಟರ್ಪಲ್ ಬಿಚ್ಚಿ ನೋಡಲಾಗಿ ಒಂದು ಆಳಿನಷ್ಟು ಎತ್ತರದಲ್ಲಿ ಹಲಗೆ ಹಾಕಿದ್ದು, ಹಲಗೆಗಳನ್ನು ತೆಗೆದು ನೋಡಲಾಗಿ 4 ಹೋರಿಗಳನ್ನು ಟೆಂಪೋದ ಒಳಗೆ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಾಟ ಮಾಡುವುದು ಕಂಡು ಬಂದಿರುತ್ತದೆ. ಗೂಡ್ಸ್ ಟೆಂಪೋ ನಂಬ್ರ: ಕೆಎ-13-ಎಎ-2177 ಆಗಿರುತ್ತದೆ. ಬಿಳಿ ಬಣ್ಣದ ಹೋರಿಗಳು-02, ಕಪ್ಪು ಬಣ್ಣದ ಹೋರಿ-01, ಬೂದು ಬಣ್ಣದ ಹೋರಿ-01 ಒಟ್ಟು 4 ಹೋರಿಗಳು. ಒಂದೊಂದು ಹೋರಿಯ ಅಂದಾಜು ಮೌಲ್ಯ ರೂ.50,000/- ಆಗಬಹುದು. ಒಟ್ಟು ಹೋರಿಗಳ ಅಂದಾಜು ಮೌಲ್ಯ ರೂ 2,00,000/- ಆಗಬಹುದು. ಗೂಡ್ಸ್ ಟೆಂಪೋದ ಅಂದಾಜು ಮೌಲ್ಯ ರೂ. 8,00,000/- ಆಗಬಹುದು .

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ: 36/2026 ಕಲಂ: 5, ಮತ್ತು 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಕಲಂ:11(ಡಿ) ಪ್ರಾಣಿ ಹಿಂಸಾ ತಡೆ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.