ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಯುವಕನೊಬ್ಬ ಮೀನಿಗೆ ಗಾಳ ಹಾಕುವುದಾಗಿ ಮನೆಯಿಂದ ಹೋದವ ಬಾರದೆ ನಾಪತ್ತೆಯಾದ ಘಟನೆ ಸಂಭವಿಸಿದೆ.
ನಾಪತ್ತೆಯಾದ ಯುವಕ ನಾಲ್ಕೂರು ನಿವಾಸಿ ಕೃಷ್ಣ ಎಂಬವರ ಮಗ ಗಣೇಶ ಎಂದು ಮಾಹಿತಿ ತಿಳಿಯಲಾಗಿದೆ.
ಘಟನೆ ವಿವರ: ಪಿರ್ಯಾದಿದಾರರಾದ ಕೃಷ್ಣ (50), ನಾಲ್ಕೂರು ಗ್ರಾಮ, ಬ್ರಹ್ಮಾವರ ಇವರ ಮಗ ಗಣೇಶ(24) ಇವರು ಶ್ರೀರಾಜ್ ಬಸ್ಸಿನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದು , ದಿನಾಂಕ 10/06/2025 ರಂದು ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು ಕೆಲವು ಬಾರಿ ಆತನು ಮೀನಿಗೆ ಗಾಳ ಹಾಕಲು ಹೋಗುತ್ತಿದ್ದು ಪಿರ್ಯಾದಿದಾರರು ಸಂಜೆ 8:00 ಗಂಟೆ ಸುಮಾರಿಗೆ ಮೀನು ವ್ಯಾಪಾರ ಮುಗಿಸಿ ಮನೆಗೆ ಬಂದಿದ್ದು ಆ ಸಮಯ ಅವರ ಮಗ ಮನೆಯಲ್ಲಿ ಇರಲಿಲ್ಲ ರಾತ್ರಿ 10:30 ಗಂಟೆಗೆ ಆತನ ಗೆಳೆಯನಾದ ಸೂರ್ಯ ಮತ್ತು ಸುದೀಪ್ ಮನೆಗೆ ಬಂದು ಪಿರ್ಯಾದಿದರರಲ್ಲಿ ಗಣೇಶನು ಮನೆಗೆ ಬಂದಿದ್ದನ ಎಂದು ಕೇಳಿದಾಗ ಪಿರ್ಯಾದಿದಾರರು ಇಲ್ಲವೆಂದು ತಿಳಿಸಿ ಸೂರ್ಯ ಮತ್ತು ಸುದೀಪ್ ಬಳಿ ವಿಚಾರಿಸಿದಾಗ ಗಣೇಶನು ತಮ್ಮೊಂದಿಗೆ 06:30 ಗಂಟೆಗೆ ಸೀತಾ ನದಿಯ ಕೊಕ್ಕರ್ಣೇ ಬ್ರಿಡ್ಜ್ ಬಳಿ ಇರುವ ಮೋಗವೀರ ಪೇಟೆ ದೇವಸ್ಥಾನ ಹತ್ತಿರದಲ್ಲಿ ಮೀನು ಗಾಳಕ್ಕೆ ಬಂದಿದ್ದು , ಮೀನು ಗಾಳ ಹಾಕುವಾಗ 7:50 ಗಂಟೆಗೆ ಗಣೇಶನು ಗಾಳಕ್ಕೆ ಕೊಕ್ಕರ್ಣೆ ಪೇಟೆಗೆ ಹೋಗಿ ಕೋಳಿ ಕರಳನ್ನು ತರುವುದಾಗಿ ಹೇಳಿ ಕೊಕ್ಕರ್ಣೆ ಪೇಟೆಗೆ ತೆರಳಿ ಕೋಳಿ ಕರಳನ್ನು ಸೂರ್ಯ ಮತ್ತು ಸುದೀಪನಿಗೆ ಕೊಟ್ಟು ತಾನು ಮುಂದೆ ಹೋಗಿ ಗಾಳ ಹಾಕುವುದಾಗಿ ಹೇಳಿ ಅಲ್ಲಿಂದ ಸುದೀಪನ ಬೈಕ್ ತೆಗೆದುಕೊಂಡು ಹೋಗಿರುತ್ತಾನೆ ಬಳಿಕ ಸುಮಾರು ಸಮಯದ ನಂತರ ಗಣೇಶನಿಗೆ ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಆತನು ಹೋಗುವ ದಾರಿಯಲ್ಲಿ ಹುಡುಕುತ್ತಾ ಹೋದಾಗ 1 ಕಿಲೋ ಮಿಟರ್ ದೂರದಲ್ಲಿ ಸುದೀಪನ ಬೈಕ್ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದು ಅಲ್ಲಿ ಸುತ್ತಮುತ್ತ ಹುಡುಕಾಡಿದಾಗ ಗಣೇಶನು ಗಾಳಕ್ಕೆ ತೆಗೆದುಕೊಂಡು ಹೋದ ನೂಲು ಮತ್ತು ಕೋಳಿ ಕರಳು ಅಲ್ಲಿನ ಬಂಡೆಯ ಮೇಲೆ ಇರುತ್ತದೆ ಆತನನ್ನು ಎಲ್ಲ ಕಡೆ ಹುಡುಕಾಡಿದ್ದಲ್ಲಿ ಸಿಕ್ಕಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಪಿರ್ಯಾದಿದಾರರು ಕೂಡ ಎಲ್ಲಾ ಕಡೆ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ ಗಣೇಶನು ಗಾಳಕ್ಕೆ ಹೋದವನು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 128/2025 ಕಲಂ:ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.