ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಅಮಾಸೆಬೈಲು ಎಂಬಲ್ಲಿ ಮಹಿಳೆಯೊಬ್ಬರಿಗೆ ವ್ಯಕ್ತಿಯೋರ್ವರು ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.
ಲೈಂಗಿಕ ಕಿರುಕುಳ ನೀಡಿದ ಆರೋಪಿ ನವೀನಚಂದ್ರ ಶೆಟ್ಟಿ ಎಂದು ಗುರುತಿಸಲಾಗಿದೆ.
ಈ ಘಟನೆ ಸಂಬಂಧಿಸಿದಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಅಮಾಸೆಬೈಲು ಪೊಲೀಸ್ ಠಾಣೆ ಅ.ಕ್ರ .ನಂ. 29-2025 ಕಲಂ 75 ಬಿ. ಎನ್. ಎಸ್
ಘಟನೆ ದಿನಾಂಕ ; ದಿನಾಂಕ:02/09/2025 ರಂದು 12:00 ಗಂಟೆಗೆ
ವರದಿ: ದಿನಾಂಕ ; ದಿನಾಂಕ 05/09/2025 ರಂದು 20;15 ಗಂಟೆಗೆ
ಘಟನೆ ನಡೆದ ಸ್ಥಳ: ; ಮಣಿಮಕ್ಕಿ ರಟ್ಟಾಡಿ ಗ್ರಾಮ ಕುಂದಾಪುರ ತಾಲ್ಲೂಕು
ಪಿರ್ಯಾದಿದಾರರು ; …… ಪ್ರಾಯ 29 ರಟ್ಟಾಡಿ ಗ್ರಾಮ ಕುಂದಾಪುರ ತಾಲೂಕು
ಆರೋಪಿತರು; ನವೀನಚಂದ್ರ ಶೆಟ್ಟಿ ರಟ್ಟಾಡಿ ಗ್ರಾಮ ಕುಂದಾಪುರ ತಾಲೂಕು
ಪ್ರಕರಣದ ಸಂಕ್ಷೀಪ್ತ ಸಾರಾಂಶ ಏನೆಂದರೆ :- ಪಿರ್ಯಾದಿದಾರರು ಧರ್ಮಸ್ಥಳ ಸ್ವಸಹಾಯ ಸಂಘದ ಸೇವಾ ಪ್ರತಿನಿಧಿಯಾಗಿ ಕೆಲಸ ಮಾಡಿಕೊಂಡಿರುತ್ತಾರೆ, ದಿನಾಂಕ 02/09/2025 ರಂದು , ಧರ್ಮಸ್ಥಳದ ಧರ್ಮ ಸಂರಕ್ಷಣಾಯಾತ್ರೆಯ ಸಭೆಯು ದಿನಾಂಕ 05/09/2025 ರಂದು ನಡೆಯುವ ಬಗ್ಗೆ ರಟ್ಟಾಡಿ ಶ್ರೀ ರಟ್ಟೆಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮುಖ್ಯಸ್ಥರಾದ ಆಪಾದಿತರಿಗೆ ಕಾರ್ಯಕ್ರಮ ಕರೆಯೋಲೆ ಕೊಡುವ ಬಗ್ಗೆ ದೂರವಾಣೆಕರೆ ಮಾಡಿದಲ್ಲಿ ತಾನು ಮನೆಯಲ್ಲಿರುವುದಾಗಿ ತಿಳಿಸಿರುತ್ತಾರೆ. ಮದ್ಯಾಹ್ನ01:00 ಗಂಟೆಯ ಒಳಗೆ ಬರುವಂತೆ ತಿಳಿಸಿದ್ದು ಪಿರ್ಯಾದಿದಾರರು 12:00 ಗಂಟೆಯ ಸುಮಾರಿಗೆ ಆಪಾದಿತರ ಮನೆ ಕುಂದಾಪುರ ತಾಲೂಕು ರಟ್ಟಾಡಿ ಗ್ರಾಮದ ಮಣಿಮಕ್ಕಿ ಎಂಬಲ್ಲಿಗೆ ಹೋಗಿದ್ದು ಆಪಾದಿತ ಜಗುಲಿಯ ಕುರ್ಚಿಯಲ್ಲಿ ಕುಳಿತ್ತಿದ್ದು ಪಿರ್ಯಾದಿದಾರರು ಕರೆಯೋಲೆಯನ್ನು ಆಪಾದಿತರ ಕೈಗೆ ಕೊಟ್ಟಾಗ ಪಿರ್ಯಾದಿದಾರರ ಕೈಯನ್ನು ಸ್ವರ್ಶಿಸಿ ಆಹ್ವಾನ ಪತ್ರಿಕೆ ತೆಗೆದುಕೊಂಡಿದ್ದು ಆಗ ಪಿರ್ಯಾದಿದಾರರಿಗೆ ಮುಜುಗರ ಉಂಟಾಗಿರುತ್ತದೆ ನಂತರ ಪಿರ್ಯಾದಿದಾರರು ಹೊರಡಲು ಅನುವಾದಾಗ ಆಪಾದಿತ ಎರಡು ನಿಮಿಷ ನಿಲ್ಲುವಂತೆ ಒತ್ತಾಯಿಸಿ ಪಿರ್ಯಾದಿದಾರರು ಕುಳಿತ ಸೋಪಾದ ಪಕ್ಕದಲ್ಲಿ ಬಂದು ಕುಳಿತು ಪಿರ್ಯಾದಿದಾರರು ನಿರೀಕ್ಷೆ ಮಾಡದೇ ಆಪಾದಿತನು ಎಡಭಾಗದ ತೋಳಿನಿಂದ ಪಿರ್ಯಾದಿಯನ್ನು ಹತ್ತಿರಕ್ಕೆ ಎಳೆದುಕೊಂಡು ಬಲ ಕೆನ್ನೆಗೆ ಮುತ್ತು ಕೊಟ್ಟಿರುತ್ತಾರೆ ಗಾಬರಿಗೊಂಡ ಪಿರ್ಯಾದಿ ಅಲ್ಲಿಂದ ತಕ್ಷಣ ಎದ್ದು ಹೊರ ಬಂದು ಮುಂದೆ ಕೆಲಸವಿದೆ ಎಂದು ಹೇಳಿ ಹೋಗುತ್ತಿರುವಾಗ ಆಪಾದಿತ 01:00 ಗಂಟೆಗೆ ಕೆಲಸ ಮುಗಿಸಿ ವಾಪಾಸು ತನ್ನ ಮನೆಗೆ ಬರುವಂತೆ ಹೇಳುತ್ತಾ ಮನೆಯ ಬಾಗೀಲವರೆಗೂ ಹಿಂಬಾಲಿಸಿಕೊಂಡು ಬಂದಿರುತ್ತಾರೆ ಎಂಬಿತ್ಯಾದಿ
