Home Crime ಬಸ್ಸಲ್ಲಿ ಯುವತಿಯೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸಿದ ಅಜ್ಜ : ಪೊಲೀಸರ ವಶಕ್ಕೆ…!!

ಬಸ್ಸಲ್ಲಿ ಯುವತಿಯೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸಿದ ಅಜ್ಜ : ಪೊಲೀಸರ ವಶಕ್ಕೆ…!!

ಮೂಡುಬಿದಿರೆ:  ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಅಜ್ಜನೋರ್ವ ಯುವತಿಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿರುವ ವೀಡಿಯೋ ಕ್ಲಿಪ್  ವೈರಲ್ ಆಗುತ್ತಿದ್ದಂತೆ ಮೂಡುಬಿದಿರೆ ಪೊಲೀಸರು ಆರೋಪಿಯನ್ನು ನಿನ್ನೆ  ವಶಕ್ಕೆ ಪಡೆದುಕೊಂಡಿದ್ದಾರೆ. 

ಬೆಳುವಾಯಿ ಗ್ರಾಮದ ಕರಿಯನಂಗಡಿ ನಿವಾಸಿ 60 ವರ್ಷದ ರೆಹ್ಮಾನ್ ಆರೋಪಿ. ಈತ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಆತನ ಬದಿಯಲ್ಲಿ ಯುವತಿಯೋರ್ವಳು ನಿಂತಿದ್ದಳು. ಆರೋಪಿಯು ತನ್ನ ಕೈಗಳಿಂದ ಆಕೆಯ ತೊಡೆ, ಕಾಲುಗಳನ್ನು ಮುಟ್ಟುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವೀಡಿಯೋದಲ್ಲಿ ಯುವತಿಯ ಮುಖ ಚಹರೆ ಸರಿಯಾಗಿ ಕಾಣದೆ ಇರುವುದರಿಂದ ತೊಂದರೆಕ್ಕೊಳಗಾಗಿರುವವರು ಪೊಲೀಸ್ ಠಾಣೆಗೆ ಬಂದು ದೂರು ನೀಡುವಂತೆ ಮೂಡುಬಿದಿರೆ ಠಾಣೆಯ ಪ್ರಕಟಣೆಯಲ್ಲಿ ತಿಳಿಸಿದೆ.