Home Crime ವ್ಯಕ್ತಿಯೊಬ್ಬರಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ…!!

ವ್ಯಕ್ತಿಯೊಬ್ಬರಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ…!!

ಕುಂದಾಪುರ : ವ್ಯಕ್ತಿಯೊಬ್ಬರಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವೀಸಾ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ ಮಾಡಿದ ಘಟನೆ ನಡೆದಿದೆ.

ವಂಚನೆಗೆ ಒಳಗಾದವರು ಕುಂದಾಪುರ ವಡೇರಹೊಬಳಿ ಗ್ರಾಮದ ನಿವಾಸಿ ಸಿಸಿಲಿ ಅವರ ಮಗ ಸುನೀಲ್ ಎಂದು ತಿಳಿದು ಬಂದಿದೆ.

ಪ್ರಕರಣದ ವಿವರ : ಪಿರ್ಯಾದಿದಾರರಾದ ಸಿಸಿಲಿ (63), ವಡೇರಹೋಬಳಿ ಗ್ರಾಮ ಕುಂದಾಪುರ ಇವರ ಮಗ ಸುನಿಲ್‌ ರವರಿಗೆ ಮಂಗಳೂರಿನ UK-IN-REGAL ACADEMY #205 2nd FLOOR Inlande Ornate OPP: Ocean Pearl Hotel Kodialbail Mangaluru 575003 ಸಂಸ್ಥೆಯು ಉದ್ಯೋಗದ ವೀಸಾ ಕೊಡಿಸುವುದಾಗಿ ಫೇಸ್ ಬುಕ್‌ ನಲ್ಲಿ ಜಾಹೀರಾತು ಪ್ರಕಟಿಸಿದ್ದು,ಪಿರ್ಯಾದಿದಾರರ ಮಗ ಜಾಹೀರಾತು ನೋಡಿ UK ನಲ್ಲಿ ಉದ್ಯೋಗಕ್ಕಾಗಿ ವೀಸಾ ಪಡೆಯಲು ಸಂಪರ್ಕಿಸಿದಾಗ 16 ಲಕ್ಷ ನೀಡಿದಲ್ಲಿ 90 ದಿವಸದಲ್ಲಿ ವೀಸಾ ಮಾಡಿಕೊಡುವ ಭರವಸೆ ನೀಡಿದ್ದು ಅದರಂತೆ ಕೋಡಿಯಾಲ್‌ ಬೈಲ್‌ ನ ಕಛೇರಿಗೆ ಹೋದಾಗ ಆರೋಪಿ ಸೂರಜ್‌ ಜೋಸೆಫ್‌ ಇದ್ದು ತನ್ನ ಕಛೇರಿಯ ಛೇಂಬರ್‌ ಗೆ ಕರೆದು 2 ಲಕ್ಷ ನಗದನ್ನು ಮುಂಗಡವಾಗಿ ಪಡೆದು ದಾಖಲಾತಿಗಳನ್ನು ಪರಿಶೀಲಿಸಿರುತ್ತಾರೆ. ನಂತರ 16 ಲಕ್ಷ ಹಣವನ್ನು ಕೂಡಲೇ ಕೊಡುವಂತೆ ಪದೇ ಪದೇ ಮೊಬೈಲ್‌ ಗೆ ಕರೆ ಮಾಡಿದ್ದು ಕೊಡದಿದ್ದರೇ ವೀಸಾ ರದ್ದಾಗುತ್ತದೆ ಎಂದು ಹೇಳುತ್ತಿದ್ದರು ದಿನಾಂಕ 27/10/2023 ರಂದು ಪಿರ್ಯಾದಿದಾರರ ಮಗಳ ಬ್ಯಾಂಕ್‌ ಖಾತೆ ಮೂಲಕ 3 ಲಕ್ಷ ಹಣವನ್ನು ಟೌನ್‌ ಕೋಆಪರೇಟಿವ್‌ ಬ್ಯಾಂಕ್‌ ಉಡುಪಿ ಶಾಖೆಯಿಂದ ರಿ ಸಂಸ್ಥೆಯ ಕಣ್ಣೂರು ಪೆಡರಲ್‌ ಬ್ಯಾಂಕ್‌ ಖಾತೆಗೆ ಜಮಾ ಮಾಡಿದ್ದು ನಂತರ ದಿನಾಂಕ 01/12/23 ರಂದು ತನ್ನ ಬ್ಯಾಂಕ್‌ ಖಾತೆಯಾದ ಕುಂದಾಪುರ ಕರ್ನಾಟಕ ಬ್ಯಾಂಕ್‌ ಶಾಖೆಯಿಂದ 13 ಲಕ್ಷ ಹಣವನ್ನು ಆರೋಪಿ ಸಂಸ್ಥೆಯ AXIS ಬ್ಯಾಂಕ್‌ ಖಾತೆಗೆ ಜಮಾ ಮಾಡಿರುತ್ತಾರೆ ಪಿರ್ಯಾದಿದಾರರ ಮಗನಿಗೆ ವೀಸಾ ಕೊಡಿಸದೇ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದು ದಿನಾಂಕ 20/03/2024 ಮಂಗಳೂರಿನ ಕಛೇರಿಗೆ ಹೋದಾಗ ಆರೋಪಿ ಹಾಜರಿದ್ದು ಪಿರ್ಯಾದಿದಾರರನ್ನು ನಂಬಿಸಿ ಪುನಃ ಈ ಸ್ಟಾಂಪ್‌ ನಲ್ಲಿ 3 ತಿಂಗಳೊಳಗೆ ವೀಸಾ ಕೊಡಿಸುವುದಾಗಿ ಇಲ್ಲವಾದಲ್ಲಿ 6 ತಿಂಗಳೊಳಗೆ ಹಣವನ್ನು ವಾಪಾಸ್ಸು ನೀಡುವುದಾಗಿ ಬರೆದು ಕಛೇರಿಯ ಶೀಲು ಮತ್ತು ಆತನ ಸಹಿ ಮಾಡಿ ನೀಡಿರುತ್ತಾನೆ. ಆರು ತಿಂಗಳೊಳಗೆ ಹಣವನ್ನು ವಾಪಾಸ್ಸು ಕೊಡದೇ ಇದ್ದಾಗ ಪುನಃ ಹೋದಾಗ ಪಿರ್ಯಾದಿದಾರರ ಮಗನ ಹೆಸರಿನಲ್ಲಿ ಅಕೌಂಟ್‌ ಪೇ ಚೆಕ್‌ ನಲ್ಲಿ ನಮೂದಿಸಿ 16 ಲಕ್ಷ ಬರೆದು ದಿನಾಂಕ 03/10/2024 ಎಂದು ನಮೂದಿಸಿ ನೀಡಿದ್ದು ದಿನಾಂಕ 16/12/2024 ರಂದು ಕಲೆಕ್ಷನ್‌ ಗೆ ಹಾಕಿದಾಗಿ Funds Insufficient ಎಂದು ಹಿಂಬರಹ ನೀಡಿರುತ್ತಾರೆ. ಆರೋಪಿಯು ವೀಸಾ ಕೊಡಿಸುವುದಾಗಿ ಪಿರ್ಯಾದಿದಾರರಿಂದ ನಗದು ಹಾಗೂ ಬ್ಯಾಂಕ್‌ ಮೂಲಕ ತನ್ನ ಸಂಸ್ಥೆಗೆ ಹಣ ವರ್ಗಾಹಿಸಿಕೊಂಡು ವೀಸಾ ಕೊಡಿಸದೇ ಹಣವನ್ನು ವಾಪಾಸ್ಸು ಕೊಡದೇ ವಂಚಿಸಿ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆ Zero FIR No 01/2025 ಕಲಂ: 318(4) 316(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.