ಮಣಿಪಾಲ: ಆಸ್ಪತ್ರೆಯ ವಸತಿ ಗೃಹದ ಮನೆಗೆ ಯಾರು ಇಲ್ಲದ ವೇಳೆಯಲ್ಲಿ ಕಳ್ಳರು ನುಗ್ಗಿ ಚಿನ್ನಾಭರಣ ಕಳ್ಳತನ ನಡೆಸಿದ ಘಟನೆ ಸಂಭವಿಸಿದೆ.
ಸೆಲ್ವಂ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ.
ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ವಿವರ : ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕಾಯಿನ್ ಸರ್ಕಲ್ ಬಳಿ ಇರುವ ಮಣಿಪಾಲ ಕೆಎಂಸಿ ಆಸ್ಪತ್ರೆಯ ವಸತಿ ಗೃಹದ ನಂ ಬಿ 235 ರಲ್ಲಿ ವಾಸಮಾಡಿಕೊಂಡಿರುವ ಸೆಲ್ವಂ ಎಂಬುವವರು ಮನೆಗೆ ಬೀಗ ಹಾಕಿ ಕೆಲಸ ನಿಮಿತ್ತ ಚೆನೈ ಗೆ ಹೋಗಿದ್ದು ದಿನಾಂಕ 26/05/2025 ರಂದು ರಾತ್ರಿ ಸಮಯ ಯಾರೋ ಕಳ್ಳರು ಮನೆಯ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಸುಮಾರು ಅಂದಾಜು 10,00,000/- ರೂಪಾಯಿ ಮೌಲ್ಯದ ಬೆಳ್ಳಿಯ ಹಾಗೂ ಚಿನ್ನದ ಆಭರಣವನ್ನು ಹಾಗೂ 15,000/- ರೂಪಾಯಿ ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 87/2025 ಕಲಂ: 331(3), 33(4), 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ.