Home Crime ತ್ರಿಶೂರ್ : ರಾಹುಲ್ ಗಾಂಧಿಗೆ ಕೊಲೆ ಬೆದರಿಕೆ : ಕೇರಳದ ಬಿಜೆಪಿ ನಾಯಕ ಪೊಲೀಸರಿಗೆ ಶರಣಾಗತಿ…!!

ತ್ರಿಶೂರ್ : ರಾಹುಲ್ ಗಾಂಧಿಗೆ ಕೊಲೆ ಬೆದರಿಕೆ : ಕೇರಳದ ಬಿಜೆಪಿ ನಾಯಕ ಪೊಲೀಸರಿಗೆ ಶರಣಾಗತಿ…!!

ತ್ರಿಶೂ‌ರ್: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಕೊಲೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಕೇರಳದ ಬಿಜೆಪಿ ನಾಯಕ ಪ್ರಿಂಟು ಮಹಾದೇವನ್‌ ಪೆರಮಂಗಲಂ ಪೊಲೀಸ್‌ ಠಾಣೆಗೆ ಮಂಗಳವಾರ ಶರಣಾಗಿದ್ದಾರೆ.

ಪ್ರಕರಣದ ತನಿಖೆಯ ಅಂಗವಾಗಿ ಪೊಲೀಸರು ಬಿಜೆಪಿ ತ್ರಿಶೂ‌ರ್ ಜಿಲ್ಲಾ ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ್ದರು. ಇದೇ ವೇಳೆ ಕಾಂಗ್ರೆಸ್ ತ್ರಿಶೂರ್ ಜಿಲ್ಲಾ ಅಧ್ಯಕ್ಷ ಗೋಕುಲ್ ಗುರುವಾಯೂರ್ ಪೆರಮಂಗಲಂ ಪೊಲೀಸರಿಗೆ ದೂರು ಸಲ್ಲಿಸಿದ್ದು, ಮಾಧ್ಯಮ ಸಂಸ್ಥೆಯ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.

ಪ್ರಿಂಟು ಮಹಾದೇವನ್ ವಿರುದ್ಧ ಕೊಲೆ ಬೆದರಿಕೆ, ಗಲಭೆಗೆ ಪ್ರಚೋದನೆ ಮತ್ತು ಸಮಾಜದಲ್ಲಿ ದ್ವೇಷ ಹರಡುವಂತಹ ಗಂಭೀರ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.ಶರಣಾಗುವ ವೇಳೆ ತಾನು ಹಿಂಸಾತ್ಮಕ ಚಟುವಟಿಕೆಗಳಿಗೆ ಸಂಬಂಧಿಸಿದ ವ್ಯಕ್ತಿಯಲ್ಲವೆಂದು ಅವರು ಸ್ಪಷ್ಟನೆ ನೀಡಿದ್ದಾರೆ.