Home Latest ಸ್ವಾವಲಂಬಿ ಗ್ರಾಮದಿಂದ ಸ್ವಾವಲಂಬಿ ಭಾರತ ನಿರ್ಮಾಣ : ವಿಜಯ ಕೊಡವೂರು…!!

ಸ್ವಾವಲಂಬಿ ಗ್ರಾಮದಿಂದ ಸ್ವಾವಲಂಬಿ ಭಾರತ ನಿರ್ಮಾಣ : ವಿಜಯ ಕೊಡವೂರು…!!

ಕೊಡವೂರು : ಗ್ರಾಮದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಕೊಡವೂರು ಗ್ರಾಮದಲ್ಲಿ ನಿರಂತರವಾಗಿ ವಿವಿಧ ಸ್ವಯಂ ಉದ್ಯೋಗ ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಇದರ ಅಂಗವಾಗಿ ದಿನಾಂಕ 04.11.2026ರಂದು ಕೊಡವೂರಿನ ಶ್ರೀ ಪಂಚದೂಮಾವತಿ ದೈವಸ್ಥಾನದ ಸಹಭಾಗಿತ್ವದಲ್ಲಿ, ವಿಜಯ ಕೊಡವೂರು ಅವರ ಮುಂದಾಳತ್ವದಲ್ಲಿ ಗ್ರಾಮದ ಮಹಿಳೆಯರಿಗಾಗಿ ಸ್ವಂತ ಉದ್ಯೋಗದ ಅವಕಾಶಗಳು ಹಾಗೂ ಸ್ವಾವಲಂಬನೆಯ ಕುರಿತು ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಕೊಡವೂರು ಬ್ಯಾಂಕ್‌ನ ಶಾಖಾ ಪ್ರಬಂಧಕರಾದ ಬಲವಂತ್ ಕುಲಕರ್ಣಿ ಅವರು ಮಹಿಳೆಯರಿಗೆ ಸ್ವಂತ ಉದ್ಯೋಗ ಪ್ರಾರಂಭಿಸಲು ದೊರೆಯುವ ಬ್ಯಾಂಕ್ ಸಾಲ ಸೌಲಭ್ಯಗಳು, ಆರ್ಥಿಕ ನೆರವು ಹಾಗೂ ಉದ್ಯಮಶೀಲತೆಯ ಕುರಿತು ಮಾಹಿತಿ ನೀಡಿದರು.

ಮಹಿಳೆಯರು ತಮ್ಮಲ್ಲಿರುವ ಕೌಶಲ್ಯ ಮತ್ತು ಪ್ರತಿಭೆಯನ್ನು ಬಳಸಿಕೊಂಡು ಸಣ್ಣ ಉದ್ಯಮಗಳನ್ನು ಪ್ರಾರಂಭಿಸಿ ಆರ್ಥಿಕವಾಗಿ ಸಬಲರಾಗಬೇಕು. ಪ್ರತಿಯೊಂದು ಕುಟುಂಬವೂ ಆರ್ಥಿಕವಾಗಿ ಸ್ವಾವಲಂಬಿಯಾದಾಗ ಗ್ರಾಮ ಅಭಿವೃದ್ಧಿಯಾಗುತ್ತದೆ. ಸ್ವಾವಲಂಬಿ ಗ್ರಾಮಗಳ ಮೂಲಕವೇ ಸ್ವಾವಲಂಬಿ ಭಾರತ ನಿರ್ಮಾಣ ಸಾಧ್ಯ ಎಂದು ಕಾರ್ಯಕ್ರಮದ ಆಶಯವನ್ನು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಪಂಚದೂಮಾವತಿ ಮಾತೃಮಂಡಳಿಯ ಅಧ್ಯಕ್ಷರಾದ ಹೇಮಾವತಿ, ಸುನಂದಾ ಶೇರಿಗಾರ್, ವಿನಾಯಕ ಉಪಸ್ಥಿತರಿದ್ದರು.

ಲಕ್ಷ್ಮಿ ಅವರು ಸ್ವಾಗತಿಸಿದರು. ಪ್ರೀತಿ ವಿಜಯ ಕೊಡವೂರು ಅವರು ಧನ್ಯವಾದ ಸಮರ್ಪಿಸಿದರು.