Home Crime ಕಾರ್ಕಳ: ಕೌಡೂರಿನ ಯುವಕ ಆತ್ಮಹತ್ಯೆ…!!

ಕಾರ್ಕಳ: ಕೌಡೂರಿನ ಯುವಕ ಆತ್ಮಹತ್ಯೆ…!!

ಕಾರ್ಕಳ: ಕುಮಟದಿಂದ ಊರಿಗೆ ಬಂದಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೌಡೂರು ಗ್ರಾಮದಲ್ಲಿ ನಡೆದಿದೆ.

ಮೃತನನ್ನು ಸುದೇಶ ಭಂಡಾರಿ (32) ಎಂದು ಗುರುತಿಸಲಾಗಿದೆ. ಅಣ್ಣ ಸೂರಜ್ ಭಂಡಾರಿ (34), ಕೌಡೂರು ಗ್ರಾಮ ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

ಸುದೇಶ ಭಂಡಾರಿ ಅವರು ನ.02 ರಂದು ಕುಮಟದಿಂದ ಕಾರ್ಕಳ ತಾಲೂಕು ಕೌಡೂರು ಗ್ರಾಮದ ಹಾಡಿಮನೆ ಎಂಬಲ್ಲಿರುವ ತನ್ನ ಮನೆಗೆ ಬಂದಿದ್ದರು. ನ.05 ರಂದು ಕುಮಟಕ್ಕೆ ಕೆಲಸಕ್ಕೆ ಹೋಗುವ ತಯಾರಿಯಲ್ಲಿದ್ದರು.

ಬೆಳಗ್ಗೆ ಸುಮಾರು 7:45ಕ್ಕೆ ತಾನಿರುವ ರೂಮಿನ ಬಾಗಿಲಿಗೆ ಒಳಗಿಂದ ಚಿಲಕ ಹಾಕಿಕೊಂಡು, ಮನೆಯ ಟ್ಯಾರೇಸ್‌ನ ಪ್ಯಾನ್‌ಗೆ ಚೂಡಿದಾರದ ಶಾಲಿನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.