Home Crime ಹೆಬ್ರಿಯ ಚಾರ ಕೃಷ್ಣ ನಾಯ್ಕ ವಿರುದ್ಧ ಕೇಸು ದಾಖಲು..!!

ಹೆಬ್ರಿಯ ಚಾರ ಕೃಷ್ಣ ನಾಯ್ಕ ವಿರುದ್ಧ ಕೇಸು ದಾಖಲು..!!

ಉಡುಪಿ : ಕಾರ್ಳಳದ ಕಾಂಗ್ರೆಸ್‌ ಯುವ ನಾಯಕ ಇನ್ನಾ ಯೋಗೀಶ್‌ ಆಚಾರ್ಯ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ” ನಿನ್ನ ದುರಂತ ಸಾವು ಮುಂದಿದೆ… ಜಾಗೃತೆ ಮಾಡು… ಎಂದು ಹೆಬ್ರಿ ತಾಲ್ಲೂಕಿನ ಚಾರ ಗ್ರಾಮದ ಕೃಷ್ಣ ನಾಯ್ಕ ಎಂಬಾತ ಕೊಲೆ ಬೆದರಿಕೆ ಹಾಕಿದ್ದು, ಕೃಷ್ಣ ನಾಯ್ಕ ಎಂಬಾತನನ್ನು ಭಾನುವಾರ ತಡ ರಾತ್ರಿ ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.

ಬಂಧನದ ಬಳಿಕ ಅನಾರೋಗ್ಯದ ಕಾರಣ ಹೇಳಿ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೃಷ್ಣ ನಾಯ್ಕ ದಾಖಲಾಗಿದ್ದಾನೆ. ಎಂದು ತಿಳಿದು ಬಂದಿದೆ.

ಹೆಬ್ರಿಯ ಚಾರ ಗ್ರಾಮ ಪಂಚಾಯತಿ ಉಪಾಧ್ಯಕ್ಷನಾಗಿದ್ದ ಕೃಷ್ಣ ನಾಯ್ಕ ಈ ಹಿಂದೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ರೀತಿಯಲ್ಲಿ ಕಮೆಂಟ್ ಮಾಡಿದ್ದು ಈ ಸಂಬಂಧ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿತ್ತು