Home Crime ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧ ವ್ಯಕ್ತಿ ನಾಪತ್ತೆ…!!

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧ ವ್ಯಕ್ತಿ ನಾಪತ್ತೆ…!!

ಉಪ್ಪುಂದ : ಕಾಸರಗೋಡಿನಿಂದ ಅಜೀರ್ ದರ್ಗಾಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಬೈಂದೂರು ವ್ಯಾಪ್ತಿಯ ರೈಲು ನಿಲ್ದಾಣದಲ್ಲಿ ನಾಪತ್ತೆಯಾಗಿದ್ದಾರೆ.

ಮುಸಾ ಯಾನೆ ಅಬುಸಾಲಿ (68) ನಾಪತ್ತೆ ಯಾದವರು. ಇವರು ಕುಟುಂಬದವರೊಂದಿಗೆ ಅಜೀ‌ರ್ ದರ್ಗಾ ದರ್ಶನ ಮಾಡಿ ಮುರುಸಾದ್ ಎಕ್ಸ್ ಪ್ರೆಸ್ ರೈಲಿನ ಮೂಲಕ ಮರಳುತ್ತಿದ್ದಾಗ ಬೈಂದೂರು ರೈಲು ನಿಲ್ದಾಣದ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದಾರೆ.

ಅವರು ನಡೆದಾಡಲು ವಾಕಿಂಗ್ ಸ್ಟಿಕ್ ಬಳಸುತ್ತಿದ್ದು.. ರೈಲು ನಿಂತ ವೇಳೆ ಯಾವುದೋ ನಿಲ್ದಾಣದಲ್ಲಿ ಇಳಿದು ನಾಪತ್ತೆಯಾಗಿರುವ ಸಾಧ್ಯತೆ ಇರುತ್ತದೆ ಎಂದು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವ್ಯಕ್ತಿ ಕಂಡುಬಂದಲ್ಲಿ ಹತ್ತಿರದ ಠಾಣೆಗೆ ಮಾಹಿತಿ ನೀಡುವಂತೆ ವಿನಂತಿಸಿದ್ದಾರೆ. 5 ಅಡಿ 11 ಇಂಚು ಎತ್ತರ, ಗೋಧಿ ಮೈಬಣ್ಣ ಬಿಳಿ ಗಡ್ಡ ಮತ್ತು ಮೀಸೆ ಕೋಲು ಮುಖ ಹೊಂದಿದ್ದು, ಮಲಯಾಳಂ, ತುಳು, ಕನ್ನಡ, ಹಿಂದಿ ಮಾತನಾಡುತ್ತಾರೆ, ಬಿಳಿ ಬಣ್ಣದ ತುಂಬು ತೋಳಿನ ಅಂಗಿ, ನೀಲಿ ಕಪ್ಪು ಬಣ್ಣದ ಪ್ಯಾಂಟ್, ಕೈಯಲ್ಲಿ ಸ್ಟೀಲ್ ವಾಕಿಂಗ್ ಸ್ಟಿಕ್ ಇದೆ.