Home Crime ಚಿನ್ನಯ್ಯನಿಂದ ಎಸ್‌ಐಟಿಗೆ ಜೀವ ಬೆದರಿಕೆ ದೂರು…!!

ಚಿನ್ನಯ್ಯನಿಂದ ಎಸ್‌ಐಟಿಗೆ ಜೀವ ಬೆದರಿಕೆ ದೂರು…!!

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿ ಬಂದು ಆರೋಪಿಯಾಗಿರುವ ಚಿನ್ನಯ್ಯ ತನಗೆ ಜೀವಬೆದರಿಕೆ ಇರುವ ಬಗ್ಗೆ ಎಸ್‌ಐಟಿಗೆ ದೂರು ನೀಡಿದ್ದಾನೆ.

ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಸೋಮವಾರ ಚಿನ್ನಯ್ಯ, ಪತ್ನಿ ರತ್ನಾ ಜತೆಯಲ್ಲಿ ಬಂದು ತನಗೆ ಮತ್ತು ತನ್ನ ಕುಟುಂಬಕ್ಕೆ ಗಿರೀಶ್ ಮಟ್ಟಣ್ಣನವರ್ ಹಾಗೂ ಇತರಿಂದ ಜೀವ ಬೆದರಿಕೆ ಇರುವ ಬಗ್ಗೆ ದೂರು ನೀಡಿದ್ದಾನೆ.

ಹೈಕೋರ್ಟ್‌ಗೆ ರಿಟ್ ಪಿಟಿಶನ್ ಹಾಕಿರುವ ಬಗ್ಗೆ ಅಳಿಯ ಪುರುಷೋತ್ತಮ ಹಾಗೂ ಕೆಲವರಿಗೆ ಗಿರೀಶ್ ಮಟ್ಟಣ್ಣನವರ್, ಅಭಿಷೇಕ್ ಕರೆ ಮಾಡಿ ಮಾಹಿತಿಗಳನ್ನು ಕೇಳುತ್ತಿದ್ದು ಇವರಿಂದ ಜೀವಬೆದರಿಕೆ ಇದ್ದು ಪೊಲೀಸ್ ರಕ್ಷಣೆ ನೀಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾನೆ.