Home Latest ಹಿಂದೂ ಕಾರ್ಯಕರ್ತರ ಮೇಲಿನ ದ್ವಂದ್ವ ನೀತಿಗೆ ರಾಮ್ ಸೇನಾ ಉಡುಪಿ ಖಂಡನೆ…!!

ಹಿಂದೂ ಕಾರ್ಯಕರ್ತರ ಮೇಲಿನ ದ್ವಂದ್ವ ನೀತಿಗೆ ರಾಮ್ ಸೇನಾ ಉಡುಪಿ ಖಂಡನೆ…!!

ಉಡುಪಿ: ಬಂಟ್ವಾಳದ ಅಬ್ದುಲ್ ರೆಹಮಾನ್ ಕೊಲೆ ಪ್ರಕರಣದಲ್ಲಿ ಕೋಕಾ ಕಾಯಿದೆಯಡಿ ಬಂಧನಕ್ಕೊಳಗಾಗಿದ್ದ ಬಜರಂಗದಳ ಮುಖಂಡ ಭರತ್ ಹಾಗೂ ಇತರರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ ಬಳಿಕವೂ, ಮತ್ತೆ ಅವರ ವಿರುದ್ಧ ಗೂಂಡಾ ಕಾಯಿದೆಯನ್ನು ಜಾರಿಗೊಳಿಸಿ ಜೈಲಿನಲ್ಲಿಡುವ ಕ್ರಮ ಅತ್ಯಂತ ಖಂಡನೀಯ.

ನ್ಯಾಯಾಲಯದಿಂದ ಜಾಮೀನು ದೊರೆತ ಬಳಿಕವೂ ಮತ್ತೊಂದು ಕಠಿಣ ಕಾನೂನಿನ ಅಡಿಯಲ್ಲಿ ಬಂಧನ ಮುಂದುವರಿಸುವ ಕ್ರಮವು ಕಾನೂನಿನ ದುರುಪಯೋಗದ ಅನುಮಾನಕ್ಕೆ ಕಾರಣವಾಗುತ್ತದೆ. ರಾಜಕೀಯ ಒತ್ತಡ ಅಥವಾ ಯಾವುದೇ ರೀತಿಯ ಓಲೈಕೆಗಾಗಿ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಗುರಿಯಾಗಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ತಕ್ಷಣ ನಿಲ್ಲಿಸಬೇಕು.

ಹಿಂದೂ ಸಮಾಜದ ಹಕ್ಕುಗಳಿಗಾಗಿ, ಸಮಾಜದ ಶಾಂತಿ ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತುವ ಕಾರ್ಯಕರ್ತರನ್ನು ದಮನಿಸುವ ಮೂಲಕ ಹಿಂದೂ ಸಂಘಟನೆಗಳನ್ನು ಮೌನಗೊಳಿಸಬಹುದು ಎಂಬ ಭ್ರಮೆ ಸರ್ಕಾರಕ್ಕೆ ಬೇಡ.

ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ನ್ಯಾಯ ಎಲ್ಲರಿಗೂ ಸಮಾನವಾಗಿರಬೇಕು.ಹಿಂದೂ ಕಾರ್ಯಕರ್ತರ ವಿರುದ್ಧ ನಡೆಯುತ್ತಿರುವ ಈ ದ್ವಂದ್ವ ನೀತಿ ಹಾಗೂ ದೌರ್ಜನ್ಯವನ್ನು ರಾಮ್ ಸೇನಾ ಉಡುಪಿ ಜಿಲ್ಲೆ ತೀವ್ರವಾಗಿ ಖಂಡಿಸುತ್ತದೆ.

ಸರ್ಕಾರ ತಕ್ಷಣ ಈ ಕ್ರಮವನ್ನು ಮರುಪರಿಶೀಲಿಸಿ, ಕಾನೂನಿನ ಚೌಕಟ್ಟಿನಲ್ಲಿ ನ್ಯಾಯಯುತವಾಗಿ ನಡೆದುಕೊಳ್ಳಬೇಕು. ಇಲ್ಲವಾದರೆ ಹಿಂದೂ ಸಮಾಜದ ಪರವಾಗಿ ಪ್ರಜಾಸತ್ತಾತ್ಮಕ ಮತ್ತು ಕಾನೂನುಬದ್ಧ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ರಾಮ್ ಸೇನೆ ತಿಳಿಸಿದೆ.