Home Crime ಕಾರ್ಕಳ : ಯುವಕನೋರ್ವ ಆತ್ಮಹತ್ಯೆ…!!

ಕಾರ್ಕಳ : ಯುವಕನೋರ್ವ ಆತ್ಮಹತ್ಯೆ…!!

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ವಿಪರೀತ ಮದ್ಯಪಾನ ಚಟ ಉಳ್ಳ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕ ಪ್ರವೀಣ್ ಎಂದು ಗುರುತಿಸಲಾಗಿದೆ.

ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಘಟನೆ : ಪಿರ್ಯಾದಿದಾರರಾದ ಲಕ್ಷ್ಮಿ (54), ಹೊಸ್ಮಾರು ಕಾರ್ಕಳ ಇವರ ಮಗ ಪ್ರವೀಣ್‌ (37) ವಿಪರೀತ ಮದ್ಯಪಾನ ಮಾಡುವ ಅಭ್ಯಾಸವುಳ್ಳವನಾಗಿದ್ದು, ದಿನಾಂಕ 19/05/2025 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ 20/05/2025 ರಂದು ಬೆಳಗ್ಗೆ 7:45 ಗಂಟೆಯ ಮಧ್ಯೆ ಮನೆಯೊಳಗೆ ಮನೆಯ ಜಂತಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 28/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.