Home Crime ಕುಂದಾಪುರ: ಮರಕ್ಕೆ ನೇಣು ಬಿಗಿದು ಸಹಕಾರಿ ಸಂಘದ ಕಾರ್ಯ ನಿರ್ವಹಣಾಧಿಕಾರಿ ಆತ್ಮಹತ್ಯೆ…!!

ಕುಂದಾಪುರ: ಮರಕ್ಕೆ ನೇಣು ಬಿಗಿದು ಸಹಕಾರಿ ಸಂಘದ ಕಾರ್ಯ ನಿರ್ವಹಣಾಧಿಕಾರಿ ಆತ್ಮಹತ್ಯೆ…!!

ಕುಂದಾಪುರ: ಮರಕ್ಕೆ ನೇಣು ಬಿಗಿದುಕೊಂಡು ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಟ್‌ಬೆಲ್ತೂರಿನಲ್ಲಿ  ಸಂಭವಿಸಿದೆ.

ಮೃತರನ್ನು ಕಟ್‌ಬೆಲ್ತೂರು ಗ್ರಾಮದ ರಾಘವೇಂದ್ರ ಜೋಗಿ (48) ಎಂದು ತಿಳಿದು ಬಂದಿದೆ.

ಇವರು ಕೋಟೇಶ್ವರದ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಕಳೆದ 18 ವರ್ಷಗಳಿಂದ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.

ಸೆ.24ರಂದು ಬೆಳಗ್ಗೆ 9:45ರಿಂದ ಮಧ್ಯಾಹ್ನ 12:30ರ ನಡುವಿನ ಅವಧಿಯಲ್ಲಿ ಮನೆಯ ಸಮೀಪದ ರವಿ ಬಳೆಗಾರರ ಜಾಗದಲ್ಲಿದ್ದ ಮರಕ್ಕೆ ರಾಘವೇಂದ್ರ ಜೋಗಿ ನೇಣು ಬಿಗಿದುಕೊಂಡಿದ್ದರು.

ಗಮನಿಸಿದ ಕುಟುಂಬಸ್ಥರು ಹಾಗೂ ಸ್ಥಳೀಯರು ಹಗ್ಗವನ್ನು ತುಂಡರಿಸಿ ಅವರನ್ನು ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಪರೀಕ್ಷಿಸಿದ ವೈದ್ಯಾಧಿಕಾರಿಗಳು ಮಧ್ಯಾಹ್ನ 1:19ಕ್ಕೆ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಮನೆಯಲ್ಲಿದ್ದ ಡೆತ್‌ನೋಟ್‌ನಲ್ಲಿ ತಮ್ಮ ಸಾವಿಗೆ ತಾನೇ ಕಾರಣ ಎಂಬುದಾಗಿ ಬರೆದಿರುವುದು ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವೈಯಕ್ತಿಕ ಸಮಸ್ಯೆ ಅಥವಾ ಇನ್ಯಾವುದೋ ವಿಚಾರದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.