Home Crime ಮಂಗಳೂರು: ಮಾದಕ ವಸ್ತು ಸೇವಿಸಿದ್ದ ಯುವಕನ ಬಂಧನ….!!

ಮಂಗಳೂರು: ಮಾದಕ ವಸ್ತು ಸೇವಿಸಿದ್ದ ಯುವಕನ ಬಂಧನ….!!

ಮಂಗಳೂರು: ನಗರದ ಪಣಂಬೂರು ಸಮೀಪ ಗಸ್ತಿನಲ್ಲಿದ್ದ ಪೊಲೀಸರಿಗೆ ಅನುಮಾನಾಸ್ಪದವಾಗಿ ಕಂಡುಬಂದ ಯುವಕನನ್ನು ವಿಚಾರಿಸಿದಾಗ ಮಾದಕ ವಸ್ತು ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಆರೋಪಿ ಮೊಹಮ್ಮದ್ ಜಾಕೀರ್ ಹುಸೈನ್ (20) ಎಂದು ಗುರುತಿಸಲಾಗಿದೆ.

ನ.09 ರಂದು ಸಂಜೆ 4 ಗಂಟೆಗೆ ಪಣಂಬೂರು ಪೊಲೀಸ್ ಠಾಣೆಯ PSI ಜ್ಞಾನಶೇಖರ್ ಅವರು ಸಿಬ್ಬಂದಿಗಳೊಂದಿಗೆ ಮಂಗಳೂರು ತಾಲೂಕು ಕಸಬಾ ಬೇಂಗ್ರೆ ಸೂಪರ್ ಸ್ಟಾರ್ ಮೈದಾನದ ಬಳಿ ಗಸ್ತಿನಲ್ಲಿದ್ದರು. ಈ ವೇಳೆ ಒಬ್ಬ ಯುವಕ ಅನುಮಾನಾಸ್ಪದವಾಗಿ ನಿಂತಿರುವುದು ಕಂಡುಬಂದಿದೆ.

ಆತನನ್ನು ವಿಚಾರಿಸಿದಾಗ ಬಾಯಿಯಿಂದ ಘಾಟು ವಾಸನೆ ಬರುತ್ತಿದ್ದು, ಮಾತನಾಡಲು ತಡವರಿಸುತ್ತಾ ನಶೆಯಲ್ಲಿರುವಂತೆ ಕಂಡುಬಂದಿದ್ದಾನೆ. ವಿಚಾರಣೆ ವೇಳೆ ತಾನು ಮಾದಕ ವಸ್ತು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.

ಬಳಿಕ ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗಾಗಿ ಎ.ಜೆ. ಆಸ್ಪತ್ರೆಗೆ ಕಳುಹಿಸಲಾಗಿತ್ತು. ವೈದ್ಯಕೀಯ ಪರೀಕ್ಷಾ ವರದಿಯಲ್ಲಿ Amphetamine AND Methamphetamine is POSITIVE ಎಂದು ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ಆರೋಪಿತನ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.