Home Crime ಉಡುಪಿ ಬಸ್ ನಿಲ್ದಾಣ ಬಳಿ ಪಿಯು ವಿದ್ಯಾರ್ಥಿ ಮೇಲೆ ಚೂರಿ ಇರಿತ : ಪ್ರಕರಣ ದಾಖಲು…!!

ಉಡುಪಿ ಬಸ್ ನಿಲ್ದಾಣ ಬಳಿ ಪಿಯು ವಿದ್ಯಾರ್ಥಿ ಮೇಲೆ ಚೂರಿ ಇರಿತ : ಪ್ರಕರಣ ದಾಖಲು…!!

ಉಡುಪಿ: ಬ್ರಹ್ಮಾವರದಲ್ಲಿ ಹುಲಿವೇಷ ಸ್ಪರ್ಧೆಗೆ ತೆರಳಲು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮೇಲೆ ಗುಂಪೊಂದು ಹಲ್ಲೆ ನಡೆಸಿ ಚೂರಿಯಿಂದ ಇರಿದ ಘಟನೆ ಸಂಜೆ ನಡೆದಿದೆ.

ಮೂಳೂರು ಕಾಪು ನಿವಾಸಿ, 16 ವರ್ಷದ ವಿದ್ಯಾರ್ಥಿ ಸಾತ್ವೀಕ್ (ದೂರುದಾರ)  ಸಂಜೆ 6 ಗಂಟೆಗೆ ಮನೆಯಿಂದ ಹೊರಟು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಸ್ನೇಹಿತನಿಗಾಗಿ ಕಾಯುತ್ತಾ ನಿಂತಿದ್ದ.

ಆ ವೇಳೆ ಅಲ್ಲಿದ್ದ ಕೆಲವು ಹುಡುಗರಲ್ಲಿ ಒಬ್ಬನು ರಾಹುಲ್ ಭುಜಕ್ಕೆ ತಾಗಿಕೊಂಡು ಹೋಗಿದ್ದಾನೆ. ದೂರುದಾರರು ಕ್ಷಮೆ ಕೇಳಿ ಮುಂದೆ ಹೋಗಿದ್ದರೂ, ರಾತ್ರಿ 7:01 ರ ಸುಮಾರಿಗೆ ಅದೇ ಗುಂಪು ಪುನಃ ಬಂದು ಏಕಾಏಕಿ ಕೈಯಿಂದ ದೂಡಿ ಹಲ್ಲೆಗೆ ಮುಂದಾಗಿದೆ.

“ಯಾಕೆ ಹಲ್ಲೆ ಮಾಡುತ್ತಿದ್ದೀರಿ” ಎಂದು ಪ್ರಶ್ನಿಸಿದಾಗ, ಆರೋಪಿ ತಲೆಗೆ, ಕೈಗೆ ಹಲ್ಲೆ ಮಾಡಿ, ಕೊಲೆ ಮಾಡುವ ಉದ್ದೇಶದಿಂದ ಸೊಂಟದಲ್ಲಿದ್ದ ಚೂರಿಯನ್ನು ತೆಗೆದು ತಲೆ ಮತ್ತು ಮುಖಕ್ಕೆ ಇರಿದಿದ್ದಾನೆ. ಇದರಿಂದ ವಿದ್ಯಾರ್ಥಿಗೆ ತೀವ್ರ ರಕ್ತಗಾಯವಾಗಿದೆ.

ಹಲ್ಲೆಯ ನಂತರ “ನಿನ್ನನ್ನು ಜೀವಸಹಿತ ಬಿಡುವುದಿಲ್ಲ” ಎಂದು ಅವಾಚ್ಯ ಶಬ್ದಗಳಿಂದ ಬೈದು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಗಾಯಗೊಂಡ ವಿದ್ಯಾರ್ಥಿಯನ್ನು ಸ್ನೇಹಿತನ ಸಹಾಯದಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ 128/2026 ಕಲಂ 115(2), 118(2), 352, 351(2), 109, 3(5) BNS ಹಾಗೂ 75 JJ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.