Home Crime ಕಂಕನಾಡಿ: ಸಲೂನ್ ಶೆಟರ್ ಬೀಗ ಮುರಿದು ಕಳ್ಳತನ : ಪಕ್ಕದ ಅಂಗಡಿಯಲ್ಲೂ ಕಳ್ಳತನಕ್ಕೆ ಯತ್ನ…!!

ಕಂಕನಾಡಿ: ಸಲೂನ್ ಶೆಟರ್ ಬೀಗ ಮುರಿದು ಕಳ್ಳತನ : ಪಕ್ಕದ ಅಂಗಡಿಯಲ್ಲೂ ಕಳ್ಳತನಕ್ಕೆ ಯತ್ನ…!!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಪಂಪ್‌ವೆಲ್ ಬಳಿ ಇರುವ ವೆಸ್ಟ್ ಗೇಟ್ ಸೆಂಟರ್ ಕಟ್ಟಡದಲ್ಲಿರುವ ಸಿಗ್ನೇಚರ್ ಸಲೂನ್‌ಗೆ ನುಗ್ಗಿದ ಅಪರಿಚಿತರು ಬೀಗ ಮುರಿದು ರೂ.1700 ನಗದು ಹಣ ಕಳವು ಮಾಡಿರುವ ಘಟನೆ ನಡೆದಿದೆ.

ಸಲೂನ್ ಮಾಲೀಕ ಎ.ಕೆ. ಶರತ್ ಕುಮಾರ್ ನೀಡಿದ ದೂರಿನಂತೆ, ರಾತ್ರಿ 9:30ಕ್ಕೆ ಅಂಗಡಿಯಲ್ಲಿ ಕೆಲಸ ಮಾಡುವವರು ಸಲೂನ್‌ನ ಶೆಟರ್‌ಗೆ ಬೀಗ ಹಾಕಿ ಮನೆಗೆ ತೆರಳಿದ್ದರು.

ಬೆಳಿಗ್ಗೆ 7 ಗಂಟೆಗೆ ಬಂದು ನೋಡಿದಾಗ ಸಲೂನ್‌ನ ಶೆಟರ್ ಅರ್ಧ ತೆರೆದ ಸ್ಥಿತಿಯಲ್ಲಿತ್ತು. ಒಳಗೆ ಪರಿಶೀಲಿಸಿದಾಗ ಯಾರೋ ಅಪರಿಚಿತರು ಒಳಪ್ರವೇಶಿಸಿ ಡ್ರಾವರ್‌ಗಳನ್ನು ತೆರೆದು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದು, ಡ್ರಾವರ್‌ನಲ್ಲಿದ್ದ ರೂ.1700 ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡುಬಂದಿದೆ.

ಅದೇ ರೀತಿ ಪಕ್ಕದಲ್ಲಿರುವ BLOOM Flowers ಎಂಬ ಅಂಗಡಿಯಲ್ಲೂ ಬೀಗ ಮುರಿದು ಕಳ್ಳತನಕ್ಕೆ ಪ್ರಯತ್ನಿಸಿರುವುದು ಕಂಡುಬಂದಿದೆ.

ನ.08 ರ ರಾತ್ರಿ 9:30 ರಿಂದ ನ.09 ರ ಬೆಳಿಗ್ಗೆ 7 ಗಂಟೆಯ ಮಧ್ಯೆ ಅಪರಿಚಿತರು ಯಾವುದೋ ಆಯುಧದಿಂದ ಶೆಟರ್ ಬೀಗ ಮುರಿದು, ಬಾಗಿಲನ್ನು ಜಖಂಗೊಳಿಸಿ ಒಳಗೆ ಪ್ರವೇಶಿಸಿ ಕಳ್ಳತನ ಮಾಡಿದ್ದಾರೆ.

ಈ ಬಗ್ಗೆ ಕಂಕನಾಡಿ ಟೌನ್ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.