ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಮಡಿಕುಳಬೆಟ್ಟು ಎಂಬಲ್ಲಿ 92 ವರ್ಷದ ವೃದ್ಧೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಮೃತರನ್ನು ಗುಲಾಬಿ ಶೆಡ್ತಿ (92) ಎಂದು ಗುರುತಿಸಲಾಗಿದೆ.
ಅವರು ತಮ್ಮ ಪುತ್ರಿ ಜ್ಯೋತಿ ಅವರೊಂದಿಗೆ ಮಡಿಕುಳಬೆಟ್ಟುವಿನ ಮನೆಯಲ್ಲಿ ವಾಸವಾಗಿದ್ದರು.
ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಗುಲಾಬಿ ಶೆಡ್ತಿಯವರು ಸೆಪ್ಟೆಂಬರ್ 24ರಂದು ಬೆಳಗ್ಗೆ 9ರಿಂದ 10 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಅವರ ಪುತ್ರ ಉಮಾನಾಥ ಶೆಟ್ಟಿ (66), ಕೇದೂರು, ಕುಂದಾಪುರ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ಕಲಂ 194 BNSS ಅಡಿಯಲ್ಲಿ ತನಿಖೆ ಮುಂದುವರಿದಿದೆ.



