ಹಿರಿಯಡ್ಕ, ಅಕ್ಟೋಬರ್ 10: ಹರಿಖಂಡಿಗೆ ಕಡೆಯಿಂದ ಹಿರಿಯಡ್ಕ ಕಡೆಗೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಇಬ್ಬರನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 9ರಂದು ಸಂಜೆ KA-20-AA-5197 ನಂಬರದ ಗೂಡ್ಸ್ ಟೆಂಪೋದಲ್ಲಿ ಅಕ್ರಮ ದನ ಸಾಗಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಹಿರಿಯಡ್ಕ ಠಾಣೆಯ ಎದುರಿನ ಜಂಕ್ಷನ್ ಬಳಿ ಪೊಲೀಸರು ವಾಹನವನ್ನು ತಡೆದು ಪರಿಶೀಲಿಸಿದ್ದಾರೆ.
ವಾಹನದ ಒಳಗೆ 4 ಜಾನುವಾರುಗಳು ಇದ್ದವು. ವಾಹನದಲ್ಲಿದ್ದ ಇಬ್ಬರನ್ನು ವಿಚಾರಿಸಿದಾಗ ಅವರು:
ಅಬ್ದುಲ್ ಸತ್ತರ್ (54), ಚಾಲಕಯೋಗೀಶ ನಾಯ್ಕ್ (49)
ಎಂದು ಗುರುತಿಸಲಾಗಿದೆ.
ವಾಹನ ತನ್ನದೇ ಎಂದು ಅಬ್ದುಲ್ ಸತ್ತರ್ ತಿಳಿಸಿದ್ದಾನೆ.
ವಿಚಾರಣೆ ವೇಳೆ ಕಾರ್ಕಳ ತಾಲೂಕು ಕುಕ್ಕುಜೆ ಗ್ರಾಮದ ಪಲಬೆಟ್ಟು ನಿವಾಸಿ ಕೃಷ್ಣ ಪೂಜಾರಿ ಅವರ ಮನೆ ಬಳಿ ಮೇಯುತ್ತಿದ್ದ ಜಾನುವಾರುಗಳನ್ನು ಕಳವು ಮಾಡಿ, ಕಸಾಯಿಖಾನೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 59/2026, ಕಲಂ 303(2) BNS, ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ ಕಲಂ 11(1)(ಡಿ) ಮತ್ತು ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಸೆಕ್ಷನ್ 4, 5, 7, 12 ರಂತೆ ಪ್ರಕರಣ ದಾಖಲಾಗಿದೆ.



