ಕಾರ್ಕಳ: ನಲ್ಲೂರು ಗ್ರಾಮದ ಕೇರ ಲಂಗಾಜೆ ನಿವಾಸಿ ಬಾಬು ಗೌಡ (75) ಅವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಕುಟುಂಬದವರು ನೀಡಿದ ಮಾಹಿತಿಯಂತೆ, ಅವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಮಕ್ಕಳೇ ಊಟೋಪಚಾರದ ವ್ಯವಸ್ಥೆ ಮಾಡುತ್ತಿದ್ದರು. ಜುಲೈ 29ರಂದು ಸಂಜೆ ಪುತ್ರಿ ಶೋಭಾ ಅವರು ಊಟ ನೀಡಿ ಮನೆಗೆ ತೆರಳಿದ್ದರು. ಬಳಿಕ ಜುಲೈ 30ರಂದು ಬೆಳಿಗ್ಗೆ ಚಹಾ-ತಿಂಡಿ ನೀಡಲು ಹೋದಾಗ ಅವರು ಮನೆಯಲ್ಲಿ ಕಾಣಿಸಿರಲಿಲ್ಲ.
ಸತತ ಹುಡುಕಾಟದ ಬಳಿಕ ಜುಲೈ 31ರಂದು ಬೆಳಿಗ್ಗೆ ಮನೆಯ ಸಮೀಪದ ಸರ್ಕಾರಿ ಬಾವಿಯ ಬಳಿ ಅವರ ಚಪ್ಪಲಿ ಪತ್ತೆಯಾಯಿತು. ಅನುಮಾನಗೊಂಡು ಬಾವಿಯೊಳಗೆ ಪರಿಶೀಲಿಸಿದಾಗ ಬಾಬು ಗೌಡ ಅವರ ಮೃತದೇಹ ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿದೆ.
ಮೃತರು ವಿಪರೀತ ಮದ್ಯಪಾನದ ಅಭ್ಯಾಸ ಹೊಂದಿದ್ದು, ಇದೇ ಕಾರಣದಿಂದ ಜೀವನದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಈ ಸಂಬಂಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




