Home Crime ಅರೆಶಿರೂರಿ ನಲ್ಲಿ ಸ್ಕೂಟರ್ ಬೆಂಕಿಗೆ ಆಹುತಿ…!!

ಅರೆಶಿರೂರಿ ನಲ್ಲಿ ಸ್ಕೂಟರ್ ಬೆಂಕಿಗೆ ಆಹುತಿ…!!

ಕುಂದಾಪುರ: ಬೈಂದೂರು ತಾಲೂಕಿನ ಅರೆಶಿರೂರು ಎಂಬಲ್ಲಿ ಸ್ಕೂಟರ್ ಬೆಂಕಿಗಾಹುತಿಯಾದ ಘಟನೆ ವರದಿಯಾಗಿದೆ.

ಸವಾರರಾದ ರೇಖಾ ಪೂಜಾರಿ ಅಪಾಯದಿಂದ ಪಾರಾಗಿದ್ದಾರೆ. ತಾಂತ್ರಿಕ ದೋಷದಿಂದ ಪಯಣದ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಕೂಟರ್ ಸುಟ್ಟುಹೋಗಿದೆ.

ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.