Home Karavali Karnataka ಹೆಲ್ಪಿಂಗ್ ಹ್ಯಾಂಡ್ಸ್ ಚಾರೀಟೇಬಲ್ ಟ್ರಸ್ಟ್ (ರಿ.) ಕುಂದಾಪುರ ಇವರ ಆಯೋಜನೆಯಲ್ಲಿ ನೊಂದ ಹೃದಯಗಳಿಗೆ ನೆರವಿನ ಹಸ್ತ…!!

ಹೆಲ್ಪಿಂಗ್ ಹ್ಯಾಂಡ್ಸ್ ಚಾರೀಟೇಬಲ್ ಟ್ರಸ್ಟ್ (ರಿ.) ಕುಂದಾಪುರ ಇವರ ಆಯೋಜನೆಯಲ್ಲಿ ನೊಂದ ಹೃದಯಗಳಿಗೆ ನೆರವಿನ ಹಸ್ತ…!!

ಕುಂದಾಪುರ : ಹೆಲ್ಪಿಂಗ್ ಹ್ಯಾಂಡ್ಸ್ ಚಾರೀಟೇಬಲ್ ಟ್ರಸ್ಟ್ (ರಿ.) ಕುಂದಾಪುರ (ನೊಂದ ಹೃದಯಗಳಿಗೆ ನೆರವಿನ ಹಸ್ತ) ಇವರ ಆಯೋಜನೆಯಲ್ಲಿ, ರಕ್ತನಿಧಿ, ಕೆ.ಎಂ.ಸಿ ಆಸ್ಪತ್ರೆ ಮಣಿಪಾಲ ಸಹಕಾರದೊಂದಿಗೆ,ವಿರಾಟ್ ಫ್ರೆಂಡ್ಸ್ ಹೊದ್ರಾಳಿ, ಗೆಳೆಯರ ಬಳಗ ಬೀಜಾಡಿ, JCI ಕುಂದಾಪುರ, ವೀರ ಮಹಾಕಾಳಿ ಫ಼್ರೆಂಡ್ಸ್ ಬೀಜಾಡಿ, ವೀರ ಕೇಸರಿ ಫ಼್ರೆಂಡ್ಸ್ ಕೋಟೇಶ್ವರ ಇವರ ಸಹಯೋಗದೊಂದಿಗೆ, ದೇಶ ಸೇವೆಯಲ್ಲಿ ನಮ್ಮನ್ನಗಲಿದ ನಮ್ಮೂರಿನ ಹೆಮ್ಮೆಯ ವೀರ ಯೋಧ ಅನೂಪ್ ಪೂಜಾರಿ ಇವರ ಸವಿ‌ ನೆನಪಿನಲ್ಲಿ “ನೆತ್ತರ ನೆರವು”ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಶಾರದಾ ಕಲ್ಯಾಣ ಮಂಟಪ ಕೋಟೇಶ್ವರ ಇಲ್ಲಿ ದಿನಾಂಕ‌ – 18-01-2026 ರಂದು ಭಾನುವಾರ – ಯಶಸ್ವಿಯಾಗಿ ನೆರವೆರಿತು, ಈ ಒಂದು ಯಶಸ್ವಿ ರಕ್ತದಾನ ಶಿಬಿರದಲ್ಲಿ ಒಟ್ಟು 117 ರಕ್ತದಾನಿಗಳು ಪಾಲ್ಗೊಂಡಿದ್ದು, ಒಟ್ಟು 100 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

ಈ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರದ ಜನಪ್ರಿಯ ಶಾಸಕರಾದ ಕಿರಣ್ ಕುಮಾರ ಕೊಡ್ಗಿಯವರು ವಹಿಸಿದ್ದು, ವೀರ ಯೋಧ ಅನೂಪ್‌ ಪೂಜಾರಿಯವರ ಸಹೋದರ ಶಿವರಾಮ್ ಅಮೀನ್ ದೀಪ‌ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಮುಖ್ಯ ಅತಿಥಿಗಳಾಗಿ ಬೀಜಾಡಿ ಮೀನುಗಾರರ ಸಹಕಾರಿ ಸಂಘ ಇದರ ಅಧ್ಯಕ್ಷರಾದ ಅಶೋಕ್ ಪೂಜಾರಿ, ಕೆ.ಎಂ.ಸಿ‌ ಮಣಿಪಾಲ ವೈಧ್ಯರಾದ ಡಾ.ವಿವೇಕ್, ಮಿತ್ರ ಕ್ಲಿನಿಕ್ ಕೋಟೇಶ್ವರ ವೈಧ್ಯರಾದ ಡಾ.ರಾಜೇಶ್, ಕೋಟೇಶ್ವರ ಗ್ರಾ.ಪ ಅಧ್ಯಕರಾದ ಶ್ರೀಮತಿ ರಾಗಿಣಿ ದೇವಾಡಿಗ,ಹೆಲ್ಪಿಂಗ್ ಹ್ಯಾಂಡ್ಸ್ ಗೌರವಾಧ್ಯಕ್ಷರಾದ ರವೀಂದ್ರ ರಟ್ಟಾಡಿ, ಜ್ಞಾನಾನಂದ ಐರೋಡಿ,ವಿರಾಟ್ ಫ಼್ರೆಂಡ್ಸ್ ಹೊದ್ರಾಳಿ ಅಧ್ಯಕ್ಷರಾದ ವಿಶ್ವನಾಥ್ ಮೊಗವೀರ,ಗೆಳೆಯರ ಬಳಗ ಬೀಜಾಡಿ ಅಧ್ಯಕ್ಷರಾದ ನರಸಿಂಹ ಶ್ರೀಯಾನ್,JCI ಕುಂದಾಪುರ ಅಧ್ಯಕ್ಷರಾದ ರಾಕೇಶ್ ಶೆಟ್ಟಿ,ವೀರ ಕೇಸರಿ ಕೋಟೇಶ್ವರ ಅಧ್ಯಕ್ಷರಾದ ಸಂಪತ್ ಶೇರೆಗಾರ್ ವೀರ ಮಹಾಕಾಳಿ ಫ಼್ರೆಂಡ್ಸ್ ಬೀಜಾಡಿ ಅಧ್ಯಕ್ಷರಾದ ಅಭಿಷೇಕ್ ಬೀಜಾಡಿ,ಮಿತ್ರ ಸಂಗಮ ಬೀಜಾಡಿ ಗೌರವಾಧ್ಯಕ್ಷರಾದ ವಾದಿರಾಜ್ ಹೆಬ್ಬಾರ್ ಗೋಪಾಡಿ ಉಪಸ್ಥಿತರಿದ್ದರು.

ಗೌರವ ಸನ್ಮಾನ ಸಮಾಜಪರ ಕಾರ್ಯದಲ್ಲಿ ಹೆಸರುವಾಸಿಯಾಗಿರುವ ಇಬ್ಬರು ಸಾಧಕರಾದ ಶ್ರೀಮತಿ ಪ್ರಭಾ ರಾವ್ ಕಲ್ಯಾಣಪುರ ಹಾಗೂ ಶ್ರೀ ಲೋಕೇಶ್ ಅಂಕದಕಟ್ಟೆ ಇವರಿಗೆ ಕಡಲೂರ ಸೇವಕ ಎನ್ನುವ ಬಿರುದನ್ನು ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.ಸುಕನ್ಯಾ ತಲ್ಲೂರು ಕಾರ್ಯಕ್ರಮ‌ ನಿರೂಪಣೆ ಮಾಡಿದರು.ಹೆಲ್ಪಿಂಗ್ ಸ್ಥಾಪಕರು ಹಾಗೂ ಅಧ್ಯಕ್ಷರಾದ ಪ್ರದೀಪ್ ಮೊಗವೀರ ಕೋಟೇಶ್ವರ ಧನ್ಯವಾದ ಸಮರ್ಪಿಸಿದರು ಕೋಷಾಧಿಕಾರಿ ಸುನೀಲ್‌ಖಾರ್ವಿ ಸಹಕರಿಸಿದರು.

ಅಧ್ಯಕ್ಷರು ಹಾಗೂ ಗೌರವಾಧ್ಯಕ್ಷರು
ಮತ್ತು ಸರ್ವ ಸದಸ್ಯರು
ಹೆಲ್ಪಿಂಗ್ ಹ್ಯಾಂಡ್ಸ್ ಚಾರೀಟೇಬಲ್ ಟೃಸ್ಟ್ (ರಿ.) ಕುಂದಾಪುರ