Home Crime ಬಂಟ್ವಾಳ: ನಿರ್ಮಾಣ ಹಂತದ ಕಾಲೇಜು ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು : ಮತ್ತೋರ್ವ ಗಂಭೀರ…!!

ಬಂಟ್ವಾಳ: ನಿರ್ಮಾಣ ಹಂತದ ಕಾಲೇಜು ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು : ಮತ್ತೋರ್ವ ಗಂಭೀರ…!!

ಬಂಟ್ವಾಳ: ಕಳ್ಳಿಗೆ ಗ್ರಾಮದ ನೆತ್ರಕೆರೆ ಎಂಬಲ್ಲಿ ನಿರ್ಮಾಣ ಹಂತದ ಕಾಲೇಜು ಕಟ್ಟಡದ ಕಲ್ಲು ಕಟ್ಟುವ ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಓರ್ವ ಕಾರ್ಮಿಕ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡ ಘಟನೆ ನಡೆದಿದೆ.

ಮೃತ ಕಾರ್ಮಿಕನನ್ನು ಪಶ್ಚಿಮ ಬಂಗಾಳ ಮೂಲದ ಅಮೀ‌ರ್ ಖಾನ್ ಹಾಗೂ ಗಾಯಗೊಂಡಾತನನ್ನು ಮುಖ್ಯಾಧರ್ (37) ಎಂದು ಗುರುತಿಸಲಾಗಿದೆ.

ಮಧ್ಯಾಹ್ನ ಮುಖ್ಯಾಧರ್ ಮಹಡಿಯಲ್ಲಿ ಕೆಂಪು ಕಲ್ಲು ಕಟ್ಟುತ್ತಿದ್ದ ವೇಳೆ 2ನೇ ಮಹಡಿಯಲ್ಲಿ ಸಿಮೆಂಟ್ ಇಟ್ಟಿಗೆ ಕಟ್ಟುತ್ತಿದ್ದ ಅಮೀರ್ ಖಾನ್ ಆಕಸ್ಮಿಕವಾಗಿ ಕಾಲು ಜಾರಿ 1ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಮುಖ್ಯಾಧ‌ರ್ ಅವರ ಮೇಲೆ ಬಿದ್ದು ಅಲ್ಲಿಂದ ಇಬ್ಬರೂ ಕೂಡಾ ನೆಲಕ್ಕೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂದರ್ಭ ಇಬ್ಬರು ಕೂಡಾ ಗಂಭೀರ ಗಾಯಗೊಂಡಿದ್ದು, ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಮೀ‌ರ್ ಖಾನ್ ಅದಾಗಲೇ ಮೃತಪಟ್ಟಿದ್ದು, ಮುಖ್ಯಾಧ‌ರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಗಾಯಾಳು ಮುಖ್ಯಾಧ‌ರ್ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.