Home Karavali Karnataka ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಯ ಟ್ಯಾಬ್ಲೋ ವಿರುದ್ದ ಅಸಮಾಧಾನ ವ್ಯಕ್ತ…!!

ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಯ ಟ್ಯಾಬ್ಲೋ ವಿರುದ್ದ ಅಸಮಾಧಾನ ವ್ಯಕ್ತ…!!

ಉಡುಪಿ : ಪೋಡವಿಗೊಡೆಯನ ನಾಡು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯ ಪೀಠವನ್ನು ಈ ಭಾರಿ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಅಲಂಕರಿಸಿದರು.

ಪರ್ಯಾಯ ಮಹೋತ್ಸವದ ಮೆರವಣಿಗೆಯು ಉಡುಪಿಯ ಜೋಡುಕಟ್ಟೆಯಿಂದ ಶ್ರೀ ಕೃಷ್ಣ ಮಠದವರೆಗೆ ನಡೆದು ಬರುವ ಸಂದರ್ಭದಲ್ಲಿ ಸ್ತಬ್ದ ಚಿತ್ರ (ಟ್ಯಾಬ್ಲೋ) ವಿಚಾರವಾಗಿ ಭಾರೀ ಚರ್ಚೆ ನಡೆಯಿತು.

2026-28 ನೇ ಸಾಲಿನ ಶೀರೂರು ಪರ್ಯಾಯೋತ್ಸವದ ಮೆರವಣಿಗೆಯಲ್ಲಿ ಶಿರೂರು ಸ್ವಾಮಿ (ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿ)ಯ ಸ್ತಬ್ದ ಚಿತ್ರ ಮೊದಲಿಗೆ ಹಾಗೂ ಉಳಿದ ಅಷ್ಟ ಮಠ ಗಳ ಸ್ತಬ್ದ ಚಿತ್ರ ನಂತರದ ಸರದಿಯಲ್ಲಿ ಬರಬೇಕು ಎಂಬ ವಿಚಾರದಲ್ಲಿ ಭಾರೀ ಚರ್ಚೆ ನಡೆದು ಗೊಂದಲಕ್ಕೆ ಕಾರಣವಾಯಿತು.

ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿ 2018 ರಲ್ಲಿ ನಿಧನರಾದರು. ಅವರ ಸ್ತಬ್ದ ಚಿತ್ರ ಮೊದಲಿಗೆ ಹೋದರೆ ನಾವೆಲ್ಲರೂ ಬರುವುದಿಲ್ಲ ಎಂಬ ಮಾತು ಕೇಳಿ ಬಂದ ಹಿನ್ನೆಲೆ ಯಥಾ ಪ್ರಕಾರ ಸರದಿ ಸಾಲಿನಲ್ಲಿ ಸ್ತಬ್ದ ಚಿತ್ರ ದ ಮೆರವಣಿಗೆ ನಡೆದು ಕೊನೆಯದಾಗಿ ಶಿರೂರು ಮಠದ ಲಕ್ಷ್ಮೀ ವರ ತೀರ್ಥ ಸ್ವಾಮಿಯ ಟ್ಯಾಬ್ಲೋ ನಡೆದು ಬಂದಿತು.

9448117050 ಎಂಬ ವಾಟ್ಸಾಪ್ ಸಂಖ್ಯೆಯ ವ್ಯಕ್ತಿಯೊಬ್ಬರು ಫಾರ್ವರ್ಡ್ ಮಾಡಿರುವ ಮೆಸೇಜ್ ಲಭಿಸಿದದೆ. ” ತನ್ನ ದುಶ್ಚಟಗಳಿಂದ ಕುಖ್ಯಾತರಾಗಿ ಅಷ್ಟಮಠದ ಉಳಿದ ಎಲ್ಲಾ ಶ್ರೀಪಾದರಿಂದ ಬಹಿಷ್ಕೃತರಾಗಿದ್ದ ಲಕ್ಷ್ಮಿವರದ ಪುತ್ತಳಿ ಪರ್ಯಾಯ ಮೆರವಣಿಗೆಯಲ್ಲಿ ತಂಡಲ್ಲಿ ಪರ್ಯಾಯ ಮೆರವಣಿಗೆಯಲ್ಲಿ ಭಾಗವಹಿಸದಿರಲು ಉಳಿದ ಎಲ್ಲಾ ಮಠಾಧೀಶರು ಇಂದು ಸಂಜೆಯ ತುರ್ತು ಸಭೆಯಲ್ಲಿ ಒಮ್ಮತದಿಂದ ನಿರ್ಧರಿಸಿದ್ದಾರೆ. ಎಂದು ನಮೂದಿಸಲಾಗಿತ್ತು. ಈ ಮೆಸೇಜ್ ಮಾಡಿದ ವ್ಯಕ್ತಿಯ ವಿರುದ್ಧ ಹಾಗೂ ಫೋರ್ವರ್ಡ್ ಮಾಡಿದ ವ್ಯಕ್ತಿಯ ವಿರುದ್ಧ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮಿಯ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ ದೂರು ದಾಖಲಿಸಲು ಮುಂದಾಗಿದ್ದಾರೆ.