ಪಡುಬಿದ್ರಿ : ನಿನ್ನೆ ರಾತ್ರಿ ಪಡುಬಿದ್ರಿ ಸಮೀಪ ಮುದರಂಗಡಿಯಲ್ಲಿ ವ್ಯಕ್ತಿಯೊಬ್ಬರು ತನ್ನ ಮನೆಗೆ ತೆರಳುತ್ತಿರುವಾಗ ತಾನು ಚಲಾಯಿಸುತ್ತಿದ್ದ ಸ್ಕೂಟಿ ರಿಕ್ಷಾಕ್ಕೆ ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು, ತಕ್ಷಣವೇ ಅವರನ್ನು ಮಣಿಪಾಲದ ಕೆ.ಎಮ್. ಸಿ. ಆಸ್ಪಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತಪಟ್ಟ ವ್ಯಕ್ತಿ ಅರುಣ್ ಸನಿಲ್ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.
ಅರುಣ್ ಸನಿಲ್ ಅವರು ಶ್ರೀ ಭದ್ರಾಕಾಳಿ ಮಹಾಮಾರಿಕಾಂಬಾ ದೇವಸ್ಥಾನ, ಗುಡ್ಯಾಮ್ ಇದರ ಟ್ರಾಸ್ಟೀ, ಸಮಾಜ ಸೇವಕ, ಹಲವಾರು ಸಂಘಸಂಸ್ಥೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇವರು ಸ್ನೇಹಜೀವಿ. ಫ್ರೆಂಡ್ಸ್ ಕ್ಲಬ್ ಬದನಿಡಿಯೂರು ಇದರ ಸ್ಥಾಪಕ, ಶ್ರೀ ಬ್ರಹ್ಮ ಬೈದರ್ಕಳ ಪಂಚದೂಮಾವತಿ ಗರೋಡಿ, ತೋನ್ಸೆ ಇಲ್ಲಿನ ಸದಸ್ಯ ರಾಗಿ ಸೇವೆ ಸಲ್ಲಿಸುತ್ತಿದ್ದರು.
ದೇವಸ್ಥಾನದ ಪ್ರತೀ ಕಾರ್ಯ ಕ್ರಮದಲ್ಲಿ ತನ್ನನ್ನು ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದ ಅವರ ಅಕಾಲಿಕ ಸಾವಿನಿಂದ ದೇವಸ್ಥಾನ ಓರ್ವ ಉತ್ತಮ ಕಾರ್ಯಕರ್ತನನ್ನು ಕಳೆದುಕೊಂಡಿದೆ ಎಂದು ಆಡಳಿತ ಮಂಡಳಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.




