ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ನದಿಯ ಮೇಲಿನ ರಾಷ್ಟ್ರೀಯ ಹೆದ್ದಾರಿ ಸೇತುವೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ
ಮೃತರನ್ನು ಗುಂಡಬಾಳ ಮುಟ್ಟದ ನಿವಾಸಿ ಜಾನ್ ಲೂಯಿಸ್ (61) ಎಂದು ತಿಳಿಯಲಾಗಿದೆ
ನಿತ್ಯದಂತೆ ಮೀನು ವ್ಯಾಪಾರಕ್ಕಾಗಿ ಕಾಸರಕೋಡ್‌ಗೆ ತೆರಳಿದ್ದ ಅವರು, ಮೀನು ಖರೀದಿ ಮುಗಿಸಿ ಹೊನ್ನಾವರದ ಕಡೆಗೆ ಬೈಕ್‌ನಲ್ಲಿ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸೇತುವೆ ಮೇಲೆ ಸಾಗುತ್ತಿದ್ದಾಗ ಟ್ಯಾಂಕರ್ ಹಾಗೂ ಎದುರುಗಡೆಯಿಂದ ಬರುತ್ತಿದ್ದ ಕಾರಿನ ನಡುವೆ ಬೈಕ್ ಸವಾರ ಗಾಬರಿಗೊಂಡು ನಿಯಂತ್ರಣ ತಪ್ಪಿದ್ದಾನೆ ಎನ್ನಲಾಗಿದೆ. ಆಗ ಅಪಘಾತವಾಗಿದೆ
ಈ ಘಟನೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



