ಕುಂದಾಪುರ: ಹಟ್ಟಿಯಂಗಡಿ ಸಿದ್ಧಿವಿನಾಯಕ ಯಕ್ಷಗಾನ ಮೇಳದಲ್ಲಿ ಲೈಟಿಂಗ್ ಕೆಲಸ ಮಾಡಿ ಕೊಂಡಿದ್ದ ಬ್ರಹ್ಮಾವರ ತಾಲೂಕಿನ ಕುದಿ ಗ್ರಾಮದ ನಿವಾಸಿ ಸೂರ್ಯ(32) ಕಾಣೆಯಾಗಿದ್ದಾರೆ.
ಜ.12 ರಂದು ಸಂಜೆ ಕರೆ ಮಾಡಿದಾಗ ತಾನು ಉಪ್ಪಿನಕುದ್ರುವಿನಲ್ಲಿ ಮೇಳದ ಯಕ್ಷಗಾನ ಕಾರ್ಯಕ್ರಮ ದಲ್ಲಿರುವುದಾಗಿ ಅವರು ತಿಳಿಸಿದ್ದರು.
ಬಳಿಕ ಅವರು ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಅಪ್ ಆಗಿತ್ತು. ಅವರೊಂದಿಗೆ ಕೆಲಸ ಮಾಡಿಕೊಂಡಿರುವ ಸಂದೀಪ್ ಅವರ ಮನೆಗೆ ಬಂದು ಜ.12ರಂದು ಉಪ್ಪಿನಕುದ್ರುವಿಗೆ’ ಅವರು ಬಂದಿಲ್ಲ ಎಂದು ತಿಳಿಸಿದ್ದರು.
ಸೂರ್ಯ ಅವರ ಪತ್ನಿ ನೇತ್ರಾವತಿ(33) ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



