ಬೆಳ್ಳಾರೆ : ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕೊಡಿಯಾಲ ಗ್ರಾಮದ ಆರ್ವಾರ ಎಂಬಲ್ಲಿ ತಾಯಿ ತನ್ನ ಮೂರು ವರ್ಷದ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ತನ್ನ ಮಗಳ ಸಾವಿನಲ್ಲಿ ಸಂಶಯ ಇದೆಯೆಂದು ಯುವತಿ ತಾಯಿ ದೂರು ನೀಡಿದ್ದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಯತೀಶ್ ಆರ್ವಾರ್ ಅವರ ಸೋದರ ಹರೀಶ್ ಎಂಬವರ ಪತ್ನಿ ಮಧುಶ್ರೀ (34) ಮತ್ತು ಆಕೆಯ ಪುತ್ರಿ ಧೃತಿ (3) ಮೃತಪಟ್ಟವರು. ಮಧುಶ್ರೀ ಪುತ್ತೂರಿನ ಬೆಟ್ಟಂಪಾಡಿ ಗ್ರಾಮದ ರುಕ್ಮಯ್ಯ ಗೌಡ ಹಾಗೂ ರತ್ನಾವತಿ ದಂಪತಿಯ ಪುತ್ರಿ.
ಸ್ಥಳೀಯರ ಮಾಹಿತಿ ಪ್ರಕಾರ, ಶನಿವಾರ ರಾತ್ರಿ ಎಲ್ಲರೊಂದಿಗೆ ಮಧುಶ್ರೀ ಊಟ ಮುಗಿಸಿ ಮಲಗಿದ್ದರು. ಬೆಳಗ್ಗೆ ನೋಡಿದಾಗ ತಾಯಿ, ಮಗು ಇರಲಿಲ್ಲ. ಮನೆಯವರು ಹುಡುಕಾಡಿದಾಗ ಇಬ್ಬರ ಶವಗಳು ಬಾವಿಯಲ್ಲಿ ಪತ್ತೆಯಾಗಿವೆ.
ಎಲ್ಲರೂ ನಿದ್ದೆಯಲ್ಲಿದ್ದಾಗ ಈಕೆ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆ ಇದೆ.
ಮಗಳ ಸಾವಿನ ಬಗ್ಗೆ ಹೆತ್ತವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು ಬೆಳ್ಳಾರೆ ಪೊಲೀಸರು ಮನೆಯವರನ್ನು ತನಿಖೆ ನಡೆಸುತ್ತಿದ್ದಾರೆ.



