ಉಡುಪಿ: ಲಯನ್ಸ್ ಕ್ಲಬ್ ಬನ್ನಂಜೆ ಕ್ರೌನ್ ವತಿಯಿಂದ ಇಂದಿರಾನಗರ ಶಿಶುಪಾಲನಾ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬನ್ನಂಜೆ ಕ್ರೌನ್ ಅಧ್ಯಕ್ಷೆ ಸುಮಾಲಿನಿ, ಕಾರ್ಯದರ್ಶಿ ಅನುಪಮಾ, ಖಜಾಂಚಿ ರಾಮಾದೇವಿ ಹಾಗೂ ಕ್ಲಬ್‌ನ ಸದಸ್ಯರು, ಶಿಶು ಪಾಲನಾ ಕೇಂದ್ರದ ಕಾರ್ಯಕರ್ತೆ ಪುಷ್ಪಾ ಬಾಲಕೃಷ್ಣ, ಮಹಿಳಾ ಮಂಡಲದ ಸ್ಥಾಪಕ ಅಧ್ಯಕ್ಷೆ ಸುನೀತಾ ಪೈ ಭಾಗವಹಿಸಿ, ಮಕ್ಕಳೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಸ್ವಾತಂತ್ರ್ಯ ದಿನದ ಮಹತ್ವವನ್ನು ತಿಳಿಸಿಕೊಡಲಾಯಿತು.



