Home Latest ಉಪ್ಪೂರು ನರ್ನಾಡು ಮದಗ ಲೇಔಟ್ ರಸ್ತೆ ಶಾಸಕ ಯಶ್ ಪಾಲ್ ಸುವರ್ಣರಿಂದ ಉದ್ಘಾಟನೆ..!!

ಉಪ್ಪೂರು ನರ್ನಾಡು ಮದಗ ಲೇಔಟ್ ರಸ್ತೆ ಶಾಸಕ ಯಶ್ ಪಾಲ್ ಸುವರ್ಣರಿಂದ ಉದ್ಘಾಟನೆ..!!

ಉಪ್ಪೂರು ಗ್ರಾಮ ನರ್ನಾಡು ಮದಗ ಲೇಔಟ್ ನಲ್ಲಿ ಸುಮಾರು 50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಾಂಕ್ರಿಟೀಕರಣದ ರಸ್ತೆಯನ್ನು ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಉದ್ಘಾಟಿಸಿದರು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ನರ್ನಾಡು ಮದಗ ಲೇಔಟ್ ಭಾಗದ ಜನರ ಬಹುವರ್ಷಗಳ ಬೇಡಿಕೆಯಾಗಿದ್ದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ 50 ಲಕ್ಷ ಅನುದಾನ ಒದಗಿಸಿ ಇದೀಗ ಸುಸಜ್ಜಿತ ರಸ್ತೆ ನಿರ್ಮಾಣಗೊಂಡಿದ್ದು, ಸೀಮಿತ ಅನುದಾನ ಲಭ್ಯತೆಯ ಸಂದರ್ಭದಲ್ಲಿಯೂ ಗರಿಷ್ಠ ಅನುದಾನ ನೀಡಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿದ್ದು, ಮುಂದಿನ ದಿನಗಳಲ್ಲಿಯೂ ಈ ಭಾಗದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವ ಭರವಸೆ ನೀಡಿದರು.

ಮದಗ ಲೇಔಟ್ ನಾಗರಿಕ ವೇದಿಕೆ ವತಿಯಿಂದ ಕಾಮಗಾರಿ ನೆರವೇರಿಸಿದ ಸಲುವಾಗಿ ಶಾಸಕರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷರಾದ ಶ್ರೀ ರಾಜೀವ ಕುಲಾಲ್, ಉಪ್ಪೂರು ಪಂಚಾಯತಿ ಮಾಜಿ ಅಧ್ಯಕ್ಷರಾದ ಶ್ರೀ ಮಹೇಶ್ ಕೋಟ್ಯಾನ್, ಉಪ್ಪೂರು ಪಂಚಾಯತಿ ಮಾಜಿ ಅಧ್ಯಕ್ಷರು, ಸದಸ್ಯರು, ನಾಗರಿಕ ವೇದಿಕೆ ಅಧ್ಯಕ್ಷರಾದ ಶ್ರೀ ಶರತ್ ಪೂಜಾರಿ, ಗೌರವ ಅಧ್ಯಕ್ಷ ಶ್ರೀ ಹರೀಶ್ ಅಮೀನ್, ಕಾರ್ಯದರ್ಶಿ ಚೆನ್ನಕೇಶವ ಭಟ್ ಮತ್ತು ನಾಗರಿಕ ವೇದಿಕೆ ಎಲ್ಲ ಪದಾಧಿಕಾರಿಗಳು, ಲೇಔಟ್ ಎಲ್ಲ ನಾಗರಿಕರು ಉಪಸ್ಥಿತರಿದ್ದರು.