Home Latest ಉಡುಪಿ : ಹುಲಿ ವೇಷಧಾರಿಗಳೊಂದಿಗೆ ಹೆಜ್ಜೆ ಹಾಕಿದ ಉದ್ಯಮಿ ತಲ್ಲೂರು ಶಿವಪ್ರಸಾದ್ ಶೆಟ್ಟಿ…!!

ಉಡುಪಿ : ಹುಲಿ ವೇಷಧಾರಿಗಳೊಂದಿಗೆ ಹೆಜ್ಜೆ ಹಾಕಿದ ಉದ್ಯಮಿ ತಲ್ಲೂರು ಶಿವಪ್ರಸಾದ್ ಶೆಟ್ಟಿ…!!

ಉಡುಪಿ : ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಉಡುಪಿಯಲ್ಲಿ ವಿಟ್ಲಪಿಂಡಿ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು. ವಿಟ್ಲಪಿಂಡಿ ವೈಭವದ ಸಂಭ್ರಮಕ್ಕೆ ಹುಲಿ ವೇಷಧಾರಿಗಳ ನೃತ್ಯ ಮತ್ತಷ್ಟು ಮೆರುಗು ನೀಡಿತು.

ಉಡುಪಿಯ ಉದ್ಯಮಿ ತಲ್ಲೂರು ಶಿವಪ್ರಸಾದ್ ಶೆಟ್ಟಿ ಅವರು ಹುಲಿ ವೇಷಧಾರಿಗಳೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಹುಲಿ ವೇಷದ ತಾಳಕ್ಕೆ ಹೆಜ್ಜೆ ಹಾಕಿದ ಅವರು ಕಲಾವಿದರನ್ನು ಉತ್ತೇಜಿಸುವ ಮೂಲಕ ಕರಾವಳಿಯ ಜನಪದ ಕಲೆಯ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದರು.

ವಿಟ್ಲಪಿಂಡಿ ವೈಭವದ ಸಂಭ್ರಮದಲ್ಲಿ ಕರಾವಳಿಯ ಸಾಂಪ್ರದಾಯಿಕ ಕಲೆ, ಸಂಸ್ಕೃತಿ ಹಾಗೂ ಜನಪದ ಪರಂಪರೆಯ ಅನಾವರಣವಾಯಿತು.