Home Crime ಉಡುಪಿ: ಹಿಟ್ ಅಂಡ್ ರನ್ ಪ್ರಕರಣ ಭೇದಿಸಿದ ಪೊಲೀಸರು : ತಿಂಗಳ ಬಳಿಕ ಕಾರು, ಆರೋಪಿ...

ಉಡುಪಿ: ಹಿಟ್ ಅಂಡ್ ರನ್ ಪ್ರಕರಣ ಭೇದಿಸಿದ ಪೊಲೀಸರು : ತಿಂಗಳ ಬಳಿಕ ಕಾರು, ಆರೋಪಿ ವಶಕ್ಕೆ…!!

ಉಡುಪಿ : ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಿಟ್ ಅಂಡ್ ರನ್ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಜುಲೈ 13ರಂದು ಅಚ್ಯುತ ಎಂಬವರು ನೀಡಿದ ದೂರಿನ ಮೇರೆಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವು ಠಾಣಾ ಅ.ಕ್ರ. 84/2026ರಂತೆ BNS ಕಲಂ 281, 125(a) ಹಾಗೂ IMV Act ಕಲಂ 134(a) ಮತ್ತು 134(b) ಅಡಿಯಲ್ಲಿ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಮಲ್ಪೆ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಆದರ್ಶ ಮತ್ತು ಕುಬೇರ ಅವರು ಸತತ ಕಾರ್ಯಾಚರಣೆ ನಡೆಸಿ, ಸುಮಾರು ಒಂದು ತಿಂಗಳ ಬಳಿಕ ಹಿಟ್ ಅಂಡ್ ರನ್‌ಗೆ ಬಳಸಲಾಗಿದ್ದ ಕಾರನ್ನು ಪತ್ತೆಹಚ್ಚಿದ್ದಾರೆ.

ಕಾರಿನ ಜೊತೆಗೆ ಆರೋಪಿಯನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣದ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.