Home Kundapura News ಬೈಂದೂರು: ಮರವಂತೆ ಬೀಚಿನಲ್ಲಿ ತಡೆಗೋಡೆಗಳ ಬಲೆ ನೆಟ್ ಅಳವಡಿಕೆಯಲ್ಲಿ ಕಾಣದ ಕೈಗಳ ಕೈವಾಡ..?

ಬೈಂದೂರು: ಮರವಂತೆ ಬೀಚಿನಲ್ಲಿ ತಡೆಗೋಡೆಗಳ ಬಲೆ ನೆಟ್ ಅಳವಡಿಕೆಯಲ್ಲಿ ಕಾಣದ ಕೈಗಳ ಕೈವಾಡ..?

ಬೈಂದೂರು: ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಪ್ರವಾಸೋದ್ಯಮ ತಾಣ ತ್ರಾಸಿ – ಮರವಂತೆ ಬೀಚಿನಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆ ಭಾನುವಾರ ಕಂಡು ಬಂದಿದೆ,

ಹೌದು ಪ್ರವಾಸಿಗರು ಅಪಾಯಕಾರಿ ಸಮುದ್ರ ಪ್ರದೇಶಕ್ಕೆ ಇಳಿಯದಂತೆ ಜಿಲ್ಲಾಡಳಿತ ಬಲೆ ನೆಟ್ ಅಳವಡಿಸಲು ಆದೇಶ ನೀಡಿದ್ದರೂ, ಮರವಂತೆ ಅಂಗಡಿ ಸಮೀಪದ ಕೆಲವು ಭಾಗಗಳಲ್ಲಿ ಬಲೆ ನೆಟ್ ಅಳವಡಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬಲೆ ನೆಟ್ ಇಲ್ಲದ ಪ್ರದೇಶಗಳಲ್ಲಿ ಪ್ರವಾಸಿಗರು ಸಮುದ್ರದ ಅಂಚಿಗೆ ಇಳಿದು ಸಂಚರಿಸುತ್ತಿರುವ ದೃಶ್ಯಗಳು ಕಂಡುಬಂದಿದ್ದು, ಸುರಕ್ಷತಾ ಕ್ರಮಗಳ ಅನುಷ್ಠಾನದ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಈ ಕುರಿತು ಮಾಧ್ಯಮದವರು ವಿಡಿಯೋ ಚಿತ್ರೀಕರಣ ನಡೆಸುತ್ತಿದ್ದ ವೇಳೆ, ಸ್ಥಳೀಯ ಅಂಗಡಿ ಮಾಲೀಕರ ಪರವಾಗಿ ಬಂದ “ಚೇಲ” ವ್ಯಕ್ತಿಯೊಬ್ಬರು ಅಸಭ್ಯವಾಗಿ ವರ್ತಿಸಿ ಚಿತ್ರೀಕರಣಕ್ಕೆ ಅಡ್ಡಿಪಡಿಸಲು ಯತ್ನಿಸಿದ ಆರೋಪ ಕೇಳಿಬಂದಿದೆ.

ಸಾರ್ವಜನಿಕರ ಸುರಕ್ಷತೆಗಾಗಿ ಜಾರಿಗೊಳಿಸಿರುವ ನಿಯಮಗಳನ್ನು ಎಲ್ಲೆಡೆ ಸಮಾನವಾಗಿ ಅನುಷ್ಠಾನಗೊಳಿಸಬೇಕು ಎಂದು ಸ್ಥಳೀಯರು ಹಾಗೂ ಪ್ರವಾಸಿಗರು ಆಗ್ರಹಿಸಿದ್ದಾರೆ.

ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ತಕ್ಷಣ ಗಮನಹರಿಸಿ, ಸುರಕ್ಷತಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಬೇಕು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.