ಬ್ರಹ್ಮಾವರ: ಅತಿವೇಗದ ಕಾರು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಕಾರ್ಮಿಕ ಸ್ಥಳದಲ್ಲೇ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ವಾರಂಬಳ್ಳಿ ಗ್ರಾಮದ ಬ್ರಹ್ಮಾವರದ ರಾಯಲ್ ಇನ್ ಎದುರು ನಡೆದಿದೆ.
ಉತ್ತರ ಪ್ರದೇಶ ಮೂಲದ ಕನಯ್ಯ ಕುಮಾರ್ ರಾಯಿ (28) ಸೇರಿದಂತೆ ಕನಯ್ಯ, ಬಿಷ್ಣು ಸರ್ಕಾರ್, ಗೋಪಿ ಹಾಗೂ ಕಿಶೋರ್ ಮೊಹಂತಿ ಅವರು ಹಂಗಾರಕಟ್ಟೆ ಶಿಫ್ ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸೆಪ್ಟೆಂಬರ್ 27 ರಂದು ರಾತ್ರಿ ಊಟಕ್ಕೆಂದು ಹಂಗಾರಕಟ್ಟೆಯಿಂದ ಬ್ರಹ್ಮಾವರದ ಬಿರಿಯಾನಿ ಪಾಯಿಂಟ್‌ಗೆ ಬಂದಿದ್ದರು.
ಊಟ ಪಾರ್ಸೆಲ್ ಪಡೆದ ಕಿಶೋರ್ ಮೊಹಂತಿ ಅವರು ಮಾತ್ರೆ ತರಲು ಮಹೇಶ್ ಆಸ್ಪತ್ರೆ ಕಡೆಗೆ ರಾಷ್ಟ್ರೀಯ ಹೆದ್ದಾರಿ ದಾಟಿ ಹೋಗಿದ್ದರು. ವಾಪಸ್ ಬಿರಿಯಾನಿ ಪಾಯಿಂಟ್‌ಗೆ ಬರಲು ರಾತ್ರಿ 8 ಗಂಟೆಗೆ* ಹೆದ್ದಾರಿ ದಾಟಿ ರಸ್ತೆಯ ಎಡ ಅಂಚಿಗೆ ಬಂದಾಗ, ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಬಂದ KA-63-M-4751 ಕಾರು ರಸ್ತೆಯ ತೀರ ಎಡಕ್ಕೆ ನುಗ್ಗಿ ಕಿಶೋರ್ ಮೊಹಂತಿ ಅವರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ತಲೆ ಮತ್ತು ಕಾಲಿಗೆ ಗಂಭೀರ ಗಾಯಗೊಂಡ ಕಿಶೋರ್ ಅವರನ್ನು ಪಕ್ಕದ ಮಹೇಶ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 8:55ಕ್ಕೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 178/2026, ಕಲಂ 281, 106 BNS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕಾರ್ಯ ಮುಂದುವರೆಸಿದ್ದಾರೆ.



