Home Crime ಕಾರ್ಕಳ: ಮನನೊಂದು ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ…!!

ಕಾರ್ಕಳ: ಮನನೊಂದು ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ…!!

ಕಾರ್ಕಳ: ಜೀವನದಲ್ಲಿ ಮನನೊಂದ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಂದಳಿಕೆ ಗ್ರಾಮದಲ್ಲಿ ನಡೆದಿದೆ.

ಮೃತರು ವಿಠಲ ಆಚಾರ್ಯ (60), ನಂದಳಿಕೆ ಗ್ರಾಮ, ಕಾರ್ಕಳ ಎಂದು ಗುರುತಿಸಲಾಗಿದೆ.

ಪಿರ್ಯಾದಿದಾರರಾದ ಮಗ ವಿನೀಶ್ (16) ನೀಡಿದ ದೂರಿನಂತೆ, ವಿಠಲ ಆಚಾರ್ಯ ಅವರು ಕುಡಿತದ ಚಟ ಹೊಂದಿದ್ದರು.ಬೆಳ್ಮಣ್ ಸರಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಮುಗಿಸಿಕೊಂಡು ರಾತ್ರಿ 9:30ಕ್ಕೆ ಮನೆಗೆ ಬಂದು ಹೊರಗಡೆ ಮನೆಯ ಜಗಲಿಯಲ್ಲಿ ಕುಳಿತಿದ್ದರು.

ನಂತರ ರಾತ್ರಿ 9:40 ರಿಂದ 10:30ರ ನಡುವಿನ ಅವಧಿಯಲ್ಲಿ ಉದಯ ಶೆಟ್ಟಿ ಅವರ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್  ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.