Home Crime ಮಣಿಪಾಲ: ರಸ್ತೆಯಲ್ಲಿ ಬುಲೆಟ್ ಜಂಪ್ ಮಾಡಿ ರೀಲ್ಸ್ ಮಾಡಿದ ಯುವಕನ ವಿರುದ್ಧ ಕೇಸ್…!!

ಮಣಿಪಾಲ: ರಸ್ತೆಯಲ್ಲಿ ಬುಲೆಟ್ ಜಂಪ್ ಮಾಡಿ ರೀಲ್ಸ್ ಮಾಡಿದ ಯುವಕನ ವಿರುದ್ಧ ಕೇಸ್…!!

ಮಣಿಪಾಲ: ಸಾರ್ವಜನಿಕ ರಸ್ತೆಯಲ್ಲಿ ಬೈಕ್ ಅನ್ನು ಅಪಾಯಕಾರಿಯಾಗಿ ಜಂಪ್ ಮಾಡಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯುವಕನ ವಿರುದ್ಧ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಉಡುಪಿ ತಾಲೂಕು ಶಿವಳ್ಳಿ ಗ್ರಾಮ, ಪೆರಂಪಳ್ಳಿ ಸಾಯಿರಾಧ ವಿಲ್ಲಾ ಎದುರು – ಮಣಿಪಾಲ-ಅಂಬಾಗಿಲು ಸಾರ್ವಜನಿಕ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಆರೋಪಿ ಮೋಹಿತ್ ಸ್ವರೂಪ್ (31)ವರ್ಷ ಎಂದು ಗುರುತಿಸಲಾಗಿದೆ.ವಾಹನ: KA-20-HD-4838 ರಾಯಲ್ ಎನ್‌ಫಿಲ್ಡ್ ಬುಲೆಟ್ ಎಂದು ತಿಳಿದು ಬಂದಿದೆ.

ಆರೋಪಿ ಮೋಹಿತ್ ಸ್ವರೂಪ್ ಅವರು ಅಂಬಾಗಿಲು ಕಡೆಯಿಂದ ಮಣಿಪಾಲ ಕಡೆಗೆ ತಮ್ಮ ಬುಲೆಟ್ ಬೈಕ್ ಅನ್ನು ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಾಲನೆ ಮಾಡಿದ್ದಾರೆ.

ರಸ್ತೆಯ ಮಧ್ಯೆ ಬೈಕ್ ಅನ್ನು ಒಮ್ಮೆಲೆ ಜಂಪ್ ಮಾಡಿ ಹಾರಿಸಿ ಸಾರ್ವಜನಿಕರಿಗೆ ಅಪಾಯ ಉಂಟು ಮಾಡಿದ್ದಾರೆ. ಈ ದೃಶ್ಯವನ್ನು ವಿಡಿಯೋ ಮಾಡಿ 02/08/2026 ರಂದು ಮಧ್ಯಾಹ್ನ 2:00ಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಆಗಿ ಹರಿದಾಡಿದೆ.

ಪೊಲೀಸರು ಆರೋಪಿಯಿಂದ ವಿಚಾರಣೆ ನಡೆಸುತ್ತಿದ್ದು, ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ.

ರೀಲ್ಸ್ ಮತ್ತು ವ್ಯೂಸ್‌ಗಾಗಿ ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡುವುದು ಅಪರಾಧ. ಇಂತಹ ಕೃತ್ಯಗಳಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಣಿಪಾಲ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 127/2026 ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.