Home Crime ಬೈಂದೂರು: ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆ…!!

ಬೈಂದೂರು: ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆ…!!

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೈಂದೂರಿನಲ್ಲಿ ಸಂಭವಿಸಿದೆ.

ಮೃತರನ್ನು ಗೋಳಿಹೊಳೆ ಗ್ರಾಮದ ಶಂಕರ ಪೂಜಾರಿ (43) ಎಂದು ಗುರುತಿಸಲಾಗಿದೆ. ಪತ್ನಿ ಸುಜಾತಾ (36) ನೀಡಿದ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

ಶಂಕರ ಪೂಜಾರಿ ಅವರು ಕೆಲ ಸಮಯದಿಂದ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದರು. ನ.03 ರಂದು ಬೆಳಗ್ಗೆ 8:15ಕ್ಕೆ ಮಕ್ಕಳನ್ನು ಮೋಟಾರ್ ಸೈಕಲ್‌ನಲ್ಲಿ ಶಾಲೆಗೆ ಬಿಡಲು ಹೋದವರು ಮನೆಗೆ ವಾಪಸ್ ಬಂದಿರಲಿಲ್ಲ.

ಕುಟುಂಬಸ್ಥರು ನೆರೆಕರೆಯವರೊಂದಿಗೆ ಹುಡುಕಾಡುತ್ತಿದ್ದಾಗ ಸಂಜೆ 4 ಗಂಟೆಗೆ ಅವರ ಮೋಟಾರ್ ಸೈಕಲ್ ಬೆಂಕಿನ ಬೇರು ಕೆಸಿಡಿಸಿ ದೃಶ್ಯಕಟ್ಟೆಯ ಮಣ್ಣು ರಸ್ತೆ ಬಳಿ ನಿಂತಿರುವುದು ಕಂಡುಬಂದಿದೆ. ಅಲ್ಲಿನ ಹಾಡಿಯಲ್ಲಿ ಹುಡುಕಿದಾಗ ಸಂಜೆ 4:30ಕ್ಕೆ ಗೇರು ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.