Home Latest ಯುವ ವಿಚಾರ ವೇದಿಕೆಯಲ್ಲಿ ಧ್ವಜಾರೋಹಣ : ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಜಯಪ್ರಕಾಶ್...

ಯುವ ವಿಚಾರ ವೇದಿಕೆಯಲ್ಲಿ ಧ್ವಜಾರೋಹಣ : ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಜಯಪ್ರಕಾಶ್ ಮಾಸ್ಟರ್…!!

ಬ್ರಹ್ಮಾವರ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಕೊಳಲಗಿರಿ ಯುವ ವಿಚಾರ ವೇದಿಕೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮ ಜರುಗಿತು. ಜಾತಬೆಟ್ಟು ಬಿಲ್ಲಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಹಾಗೂ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಜಯಪ್ರಕಾಶ್ ಮಾಸ್ಟರ್ ಧ್ವಜಾರೋಹಣ ನೆರವೇರಿಸಿದರು. ಅತಿಥಿಗಳಾಗಿ ರಮೇಶ್ ಕರ್ಕೇರಾ ಉಗ್ಗೆಲ್ ಬೆಟ್ಟು, ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ಸದಾಶಿವ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸದಸ್ಯರಿಂದ ವಂದೇ ಮಾತರಂ, ರಾಷ್ಟ್ರಗೀತೆ ಹಾಗೂ ಧ್ವಜಗೀತೆಯನ್ನು ಹೆಮ್ಮೆಯಿಂದ ಹಾಡಿ ಗೌರವಯುತವಾಗಿ ಸ್ವಾತಂತ್ರೋತ್ಸವ ನೆರವೇರಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಸದಾಶಿವ್ ಕುಮಾರ್ ಸರ್ವರಿಗೂ ಸ್ವಾಗತಿಸಿದರು . ಸಾರ್ವಜನಿಕರಿಗಾಗಿ ಹಮ್ಮಿಕೊಂಡ ಕ್ರೀಡಾ ಸ್ಪರ್ಧಾ ವಿಜೇತರ ಬಹುಮಾನದ ಪಟ್ಟಿಯನ್ನು ದಿನೇಶ ಶೆಟ್ಟಿ ವಾಚಿಸಿದರು.

ಶಶಿಕುಮಾರ್ ಧನ್ಯವಾದ ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ವೇದಿಕೆಯ ಜಯಲಕ್ಷ್ಮಿ ಅಮ್ಮುಂಜೆ ನಿರ್ವಹಿಸಿದರು.