Home Crime ಉಡುಪಿ: ಹಿರಿಯ ನಾಗರಿಕರೊಬ್ಬರ ಖಾತೆಯಿಂದ ಲಕ್ಷಾಂತರ ರೂ. ಆನ್‌ಲೈನ್ ವಂಚನೆ…!!

ಉಡುಪಿ: ಹಿರಿಯ ನಾಗರಿಕರೊಬ್ಬರ ಖಾತೆಯಿಂದ ಲಕ್ಷಾಂತರ ರೂ. ಆನ್‌ಲೈನ್ ವಂಚನೆ…!!

ಉಡುಪಿ: ಹಿರಿಯ ನಾಗರಿಕರೊಬ್ಬರ ಬ್ಯಾಂಕ್ ಖಾತೆಯಿಂದ 4.40 ಲಕ್ಷ ರೂ. ಹಣವನ್ನು ಆನ್‌ಲೈನ್ ಮೂಲಕ ಕಳವು ಮಾಡಿ ವಂಚಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

ವಂಚನೆಗೊಳಗದವರು ವಿಠಲ (76) ಎಂದು ತಿಳಿಯಲಾಗಿದೆ.

ವಿಠಲ ಅವರು ತಮ್ಮ ಯೂನಿಯನ್ ಬ್ಯಾಂಕ್ ಖಾತೆಯಲ್ಲಿ 6 ಲಕ್ಷ ರೂ. ಇಟ್ಟಿದ್ದರು. ಅದನ್ನು ಬ್ಯಾಂಕ್ ಆಫ್ ಬರೋಡಾಕ್ಕೆ ವರ್ಗಾವಣೆ ಮಾಡಲು ದಿನಾಂಕ 22/06/2026 ರಂದು ಬ್ಯಾಂಕಿಗೆ ಹೋಗಿ ಉಪ ಶಾಖಾಧಿಕಾರಿಗಳಲ್ಲಿ ತಿಳಿಸಿ ಎಲ್ಲಾ ಪೇಪರ್‌ಗಳಿಗೆ ಸಹಿ ಮಾಡಿ ಬಂದಿದ್ದರು.

ನಂತರ ಅವರು ಕಾರಣಾಂತರಗಳಿಂದ ಮಗಳ ಮನೆಯಾದ ವಿಶಾಖಪಟ್ಟಣಕ್ಕೆ ಹೋಗಿದ್ದರು. ದಿನಾಂಕ 08/09/2026 ರಂದು ಪುನಃ ಯೂನಿಯನ್ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ, ಉಳಿತಾಯ ಖಾತೆಯಿಂದ ರೂ. 4,40,000/- ವರ್ಗಾವಣೆಯಾಗಿದೆ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ.

ಆದರೆ ಪಿರ್ಯಾದಿದಾರರಿಗೆ ತಿಳಿಯದಂತೆ ದಿನಾಂಕ 15/06/2026 ರಂದು ಯಾರೋ ಅಪರಿಚಿತರು ಬ್ಯಾಂಕ್ ಖಾತೆಯಿಂದ ಆನ್‌ಲೈನ್ ಮುಖಾಂತರ 4,40,000 ರೂ. ಹಣವನ್ನು ತೆಗೆದು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 121/2026, ಕಲಂ 318(4) BNS & 66(D) IT Act ರಂತೆ ಪ್ರಕರಣ ದಾಖಲಾಗಿದೆ. ಸೈಬರ್ ವಂಚನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.