ಕುಂದಾಪುರ: ತಾಲೂಕಿನ ಉಪ್ಪಿನಕುದ್ರು ರಥಬೀದಿಯ ನಿವಾಸಿಯಾದ ಭಾಸ್ಕರ್ ಆಚಾರ್ಯ ಅವರ 18 ವರ್ಷದ ಪುತ್ರಿ ಪಲ್ಲವಿ ಅವರು ನಾಪತ್ತೆಯಾಗಿದ್ದಾರೆ.
ಜುಲೈ 13ರಂದು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ಕುಂದಾಪುರಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋದವರು ಮರಳಿ ಮನೆಗೆ ಬಂದಿರುವುದಿಲ್ಲ.
ಆತಂಕಗೊಂಡ ಕುಟುಂಬಸ್ಥರು ತಕ್ಷಣವೇ ಸಂಬಂಧಿಕರು ಹಾಗೂ ಸ್ನೇಹಿತರ ಬಳಿ ಯುವತಿಯ ಬಗ್ಗೆ ವಿಚಾರಿಸಿದ್ದಾರಾದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಸಂಬಂಧಿಕರಲ್ಲಿ ಹುಡುಕಾಟ ನಡೆಸಿದ ಕಾರಣದಿಂದಾಗಿ ಸದ್ಯ ದೂರು ನೀಡಲು ವಿಳಂಬವಾಗಿದ್ದು, ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ಯುವತಿಯು 5.92 ಅಡಿ ಎತ್ತರವಿದ್ದು, ಗೋಧಿ ಮೈಬಣ್ಣವನ್ನು ಹೊಂದಿದ್ದಾರೆ. ನಾಪತ್ತೆಯಾದ ಸಮಯದಲ್ಲಿ ಇವರು ಕಪ್ಪು ಜೀನ್ಸ್ ಹಾಗೂ ಬಿಳಿ ಬಣ್ಣದ ಟಿ-ಶರ್ಟ್ ಧರಿಸಿದ್ದು, ಕನ್ನಡ ಭಾಷೆಯನ್ನು ಮಾತನಾಡುತ್ತಾರೆ.
ಸಾರ್ವಜನಿಕರಲ್ಲಿ ಈ ಚಹರೆಯುಳ್ಳ ಯುವತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣವೇ ಕುಂದಾಪುರ ಪೊಲೀಸ್ ಠಾಣೆ (08254-230338), ಡಿ.ವೈ.ಎಸ್.ಪಿ ಕುಂದಾಪುರ ವಿಭಾಗ (9480805422), ಪಿ.ಐ ಕುಂದಾಪುರ ಠಾಣೆ (9480805455), ಅಥವಾ ಪಿ.ಎಸ್.ಐ ಕುಂದಾಪುರ ಠಾಣೆಯ ದೂರವಾಣಿ ಸಂಖ್ಯೆಗಳಾದ 8277988957 ಮತ್ತು 8277988959 ಅನ್ನು ಸಂಪರ್ಕಿಸಲು ತಿಳಿಸಿದೆ.




