Home Crime ಶಿರ್ವ: ಕುಡಿತದ ಚಟ ಮತ್ತು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆ…!!

ಶಿರ್ವ: ಕುಡಿತದ ಚಟ ಮತ್ತು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆ…!!

ಶಿರ್ವ: ಮಾನಸಿಕ ಅಸ್ವಸ್ಥತೆ ಮತ್ತು ಕುಡಿತದ ಚಟದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಪು ತಾಲೂಕು ಕಳತ್ತೂರು ಗ್ರಾಮದ ಪಾದೂರು ಚಂದ್ರನಗರದಲ್ಲಿ ನಡೆದಿದೆ.

ಮೃತರು ಮಟ್ಟಾರು ನಿವಾಸಿ ದೇಶ್ ರಾಜ್ ಬಾಬು (45) ಎಂದು ಗುರುತಿಸಲಾಗಿದೆ.

ದೇಶ್ ರಾಜ್ ಬಾಬು ಅವರು ಕಳತ್ತೂರು ಗ್ರಾಮದ ಪಾದೂರು ಚಂದ್ರನಗರದಲ್ಲಿ ಉಮರಬ್ಬ ಎಂಬುವರ ಮನೆಯಲ್ಲಿ ಮನೆಕೆಲಸ ಮಾಡಿಕೊಂಡಿದ್ದರು. ಇವರು ವಿಪರೀತ ಕುಡಿತದ ಚಟವನ್ನು ಹೊಂದಿದ್ದು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಕುಡಿತದ ಚಟ, ಮಾನಸಿಕ ಅಸ್ವಸ್ಥತೆ ಅಥವಾ ಬೇರೆ ಯಾವುದೋ ಕಾರಣದಿಂದ ಮನನೊಂದು, ಉಮರಬ್ಬ ಅವರ ಮನೆಯ ಬಾವಿಯ ಬಳಿ ಇರುವ ಹಳೆಯ ಶೇಡ್‌ನ ಹಿಂಬದಿ ತೋಟದಲ್ಲಿರುವ ಚಿಕ್ಕು ಮರದ ಗೆಲ್ಲಿಗೆ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಶಿರ್ವ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.