ಕೋಟ: ಮನೆಯಲ್ಲೇ ವಾಸವಾಗಿದ್ದ 28 ವರ್ಷದ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಚ್ಲಾಡಿ ಗ್ರಾಮದ ಚಂದ್ರ ಕೊರಗ ಅವರ ಪುತ್ರಿ ಗೀತಾ (28) ತನ್ನ ಮಗನೊಂದಿಗೆ ತಂದೆಯ ಮನೆಯಲ್ಲಿ ವಾಸವಾಗಿದ್ದು, ಮನೆ ಕೆಲಸ ಮಾಡಿಕೊಂಡಿದ್ದರು. ಸೆಪ್ಟೆಂಬರ್ 9ರಂದು ಬೆಳಗ್ಗೆ ಕೆಲಸಕ್ಕೆ ತೆರಳಿದ್ದ ಗೀತಾ, ಸುಮಾರು 8.30ರಿಂದ 9 ಗಂಟೆಯ ನಡುವಿನಲ್ಲಿ ತನಗೆ ಹುಷಾರಿಲ್ಲ ಎಂದು ತಿಳಿಸಿ ಮನೆಗೆ ವಾಪಸ್ ಬಂದಿದ್ದರು.
ಮಧ್ಯಾಹ್ನ 1.30ರ ಸುಮಾರಿಗೆ ಗೀತಾ ಅವರ ಸಹೋದರ ಅಣ್ಣಪ್ಪ ಮನೆಯಲ್ಲಿ ನೋಡಿದಾಗ, ಮನೆಯ ಜಗುಲಿ ಕೋಣೆಯ ಪಕಾಸಿಗೆ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಗೀತಾ ಪತ್ತೆಯಾಗಿದ್ದಾರೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕಾರ್ಯ ಕೈಗೊಂಡಿದ್ದಾರೆ.




