Home Latest ಜಿಲ್ಲಾಸ್ಪತ್ರೆಯ ಶೌಚಾಲಯದೊಳಗೆ ಮದ್ಯಪಾನ…!!

ಜಿಲ್ಲಾಸ್ಪತ್ರೆಯ ಶೌಚಾಲಯದೊಳಗೆ ಮದ್ಯಪಾನ…!!

ಉಡುಪಿ : ಅಜ್ದರಕಾಡು ಜಿಲ್ಲಾಸ್ಪತ್ರೆಯ, ಸಾರ್ವಜನಿಕ ಶೌಚಾಲಯದೊಳಗೆ, ಮದ್ಯವ್ಯಸನಿಗಳು ಕುಡಿದು, ಬಳಿಕ ಅದರ ಲಕೋಟೆಗಳನ್ನು ಬಾಗಿಲು ಸಂದುಗಳಲ್ಲಿ ತುರಿಸಿಟ್ಟಿರುವುದು ಕಂಡುಬಂದಿದೆ.

ರೋಗಿಗಳು, ಅಥವಾ ರೋಗಿಗಳ ಜೊತೆಗಿರುವ ಕೆಲವು ಕುಡುಕರು ನಡೆಸಿರುವ ಕೃತ್ಯ ಇರಬಹುದೆನ್ನುವ ಶಂಕೆ ವ್ಯಕ್ತವಾಗಿದೆ.

ಸಮಸ್ಯೆ ಹೀಗೆ ಮುಂದುವರಿದಲ್ಲಿ ಮದ್ಯವ್ಯಸನಿಗಳಿಂದ ವಾರ್ಡುಗಳಲ್ಲಿ ಗಲಾಟೆ, ಕರ್ತವ್ಯ ನಿರತ ದಾದಿಯರು, ವ್ಯೆದ್ಯೆಯರ ಮೇಲೆ ವಿನಾಕಾರಣ ಹಲ್ಲೆಗಳು ನಡೆಯುವ ಸಾಧ್ಯತೆಗಳು ಇರುತ್ತವೆ.

ರೋಗಿಗಳ ಹಾಗೂ ಸಿಬ್ಬಂಧಿಗಳ ಸುರಕ್ಷತೆಯ ದೃಷ್ಟಿಯಿಂದ, ಜಿಲ್ಲಾಸ್ಪತ್ರೆಯು ಸೂಕ್ತ ಸುರಕ್ಷಿತ ಕ್ರಮ ಜರುಗಿಸುವಂತೆ ಸಮಾಜಸೇವಕ ನಿತ್ಯಾನಂದ ಒಳಕಾಡುರವರು ಆಗ್ರಹಪಡಿಸಿದ್ದಾರೆ.