Home Crime ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಹಿಳೆ ಕೊಲೆ ಪ್ರಕರಣದ ಆರೋಪಿ ಪಶ್ಚಿಮ ಬಂಗಾಳದಲ್ಲಿ ಅರೆಸ್ಟ್ ..!!

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಹಿಳೆ ಕೊಲೆ ಪ್ರಕರಣದ ಆರೋಪಿ ಪಶ್ಚಿಮ ಬಂಗಾಳದಲ್ಲಿ ಅರೆಸ್ಟ್ ..!!

ಸುಳ್ಯ: 2022 ರಲ್ಲಿ ಸುಳ್ಯ ಬೀರಮಂಗಲದ ಬಾಡಿಗೆ ಮನೆಯಲ್ಲಿ ಮಹಿಳೆಯನ್ನು ಕೊಲೆ ಮಾಡಿದ್ದ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಆತನನ್ನು ಸುಳ್ಯ ಪೊಲೀಸರು ಪಶ್ಚಿಮ ಬಂಗಾಳದಿಂದ ಪತ್ತೆ ಹಚ್ಚಿ ಸುಳ್ಯ ಠಾಣೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

Maps ಸುಳ್ಯದ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಇಮ್ರಾನ್ ಶೇಖ್ ಎಂಬಾತ ಸುಳ್ಯದ ಬೀರಮಂಗಲದಲ್ಲಿ ಬಾಡಿಗೆ ಮನೆಯಲ್ಲಿ ತನ್ನ ಜೊತೆಯಲ್ಲಿದ್ದ ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ.

ಈತ ಪಶ್ಚಿಮ ಬಂಗಾಳದ ಬಾಮನ್ ಪಕೂರ್ ಪ್ರದೇಶದ ವಾಸಿಯಾಗಿದ್ದು ಅದೇ ಊರಿನ ಮಹಿಳೆ ಈತನೊಂದಿಗೆ ಬಾಡಿಗೆ ಮನೆಯಲ್ಲಿ ಇದ್ದು ಈ ಸಂದರ್ಭದಲ್ಲಿ ಆಕೆಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ.

4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆಗೆ, ಸುಳ್ಯ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯಕ ಹಾಗೂ ಸುಳ್ಯ ಠಾಣಾ PSI ಉದಯ ರವಿ ರವರ ಮಾರ್ಗದರ್ಶನದಂತೆ ದಿನಾಂಕ ಸೆ. ೦೨ರಂದು ಠಾಣಾ ಸಿಬ್ಬಂದಿಗಳಾದ ರಾಜು ನಾಯ್ಕ, ಶ್ರೀಶೈಲ ಎಂ.ಕೆ, ಸೋಮಯ್ಯ ಹಿರೇಮಠ ರವರು ಪಶ್ಚಿಮ ಬಂಗಾಳದ ಹಾದಿಪುರ್ ಗ್ರಾಮ ಎಂಬಲ್ಲಿ ದಸ್ತಗಿರಿ ಮಾಡಿ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.